ಗಗನ ಚುಂಬಿ ವಸತಿ ಕಟ್ಟಡ 
ವಿದೇಶ

ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ

ವಿಶ್ವದ ಅತಿ ಎತ್ತರದ ವಸತಿ ಕಟ್ಚಡಗಳಲ್ಲಿ ಒಂದಾದ ದುಂಬೈನ ಗಗನಚುಂಬಿ ಕಟ್ಟಡದಲ್ಲಿ ಗುರುವಾರ ಮಧ್ಯರಾತ್ರಿಯ ಅಗ್ನಿ ಅವಘಡ....

ದುಬೈ: ವಿಶ್ವದ ಅತಿ ಎತ್ತರದ ವಸತಿ ಕಟ್ಚಡಗಳಲ್ಲಿ ಒಂದಾದ ದುಂಬೈನ ಗಗನಚುಂಬಿ ಕಟ್ಟಡದಲ್ಲಿ ಗುರುವಾರ ಮಧ್ಯರಾತ್ರಿಯ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಗೆ ಕಟ್ಟಡವನ್ನು ಆವರಿಸಿಕೊಂಡು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
86 ಅಂತಸ್ತುಗಳ ಈ ಕಟ್ಟಡದ 40 ಮಹಡಿಗಳ ಒಂದು ಭಾಗಕ್ಕೆ ಬೆಂಕಿ ತಗುಲಿತ್ತು. ಕಟ್ಟಡದ ಹೊರ ಭಾಗದಲ್ಲಿ ಜನರು ಜಮಾಯಿಸಿ ಭಯದಿಂದ ಚೀರುತ್ತಿದ್ದರು ಎನ್ನಲಾಗಿದೆ.
ಮಧ್ಯರಾತ್ರಿ ಕಳೆದು ನಸುಕಿನ 1 ಗಂಟೆಯ ವೇಳೆಗೆ ಕಟ್ಟಡದ ಒಂದು ಭಾಗಕ್ಕೆ ಬೆಂಕಿ ತಗುಲಿತೆಂದು ಸ್ಥಳದಲ್ಲಿದ್ದ ಜನರು ಹೇಳಿರುವುದಾಗಿ ಅಸೋಸಿಯೇಟೆಡ್‌ ಪ್ರಸ್‌ ವರದಿ ಮಾಡಿದೆ. 
ಸ್ಥಳಕ್ಕೆ ಅಗ್ನಿ ಶಾಮಕ ಆಗಮಿಸಿದ್ದು, ಬೆಳಗಿನ 3.30ರ ವೇಳೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಅದೃಷ್ಟವಶಾತ್ ಈ ಬೆಂಕಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಮತ್ತು ಯಾರಿಗೂ ಗಾಯಗಳಾದ ವರದಿ ತಿಳಿಸಿದೆ.
ಬೆಂಕಿ ತಗುಲಿನ ಕಟ್ಟಡದ ಭಾಗವನ್ನು ತಣಿಸುವ ಕಾರ್ಯ ಇದೀಗ ಚುರುಕಿನಿಂದ ಸಾಗಿದೆ ಎಂದು ದುಬೈನ ಅಧಿಕೃತ ಮಾಧ್ಯಮ ಕಚೇರಿ ಟ್ವಿಟರ್ ಮಾಡಿದೆ.
ಕಳೆದ ಎರಡೂವರೆ ವರ್ಷಗಳಲ್ಲಿ ಈ ಕಟ್ಟಡ ಬೆಂಕಿ ಅನಾಹುತಕ್ಕೆ ಗುರಿಯಾಗಿರುವುದು ಇದು ಎರಡನೇ ಬಾರಿ. ದುಬೈನ ಮರೀನಾ ಜಿಲ್ಲೆಯ ಪ್ರಸಿದ್ಧ ವಾಟರ್‌ ಫ್ರಂಟ್‌ ಪ್ರದೇಶದಲ್ಲಿರುವ 1,100 ಅಡಿ ಎತ್ತರದ (ಸುಮಾರು 335 ಮೀಟರ್‌) ಈ ಕಟ್ಟಡಕ್ಕೆ 2015ರ ಫೆಬ್ರವರಿಯಲ್ಲಿ ಒಮ್ಮೆ ಬೆಂಕಿ ತಗುಲಿತ್ತು. ಆಗಲೂ ಯಾವುದೇ ಜೀವ ಹಾನಿ ಆಗಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!