ಬುರ್ಕಿನಾ ಫಾಸೋ: ಭಯೋತ್ಪಾದಕರು ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋದ ಟರ್ಕಿಷ್ ಕೆಫೆ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು ಇದರಲ್ಲಿ 17 ಮಂದಿ ಮೃತಪಟ್ಟಿದ್ದಾರೆ.
ಬುರ್ಕಿನಾ ಫಾಸೋದಲ್ಲಿ ಕೆಲವು ವರ್ಷಗಳಿಂದ ಇಸ್ಲಾಮಿಕ್ ಭಯೋತ್ಪಾದಕರ ಉಪಟಳ ಹೆಚ್ಚಾಗಿದ್ದು ಇದೀಗ ರೆಸ್ಟೋರೆಂಟ್ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು 9 ಮಂದಿಗೆ ಗಾಯಗಳಾಗಿವೆ.
ಕಳೆದ ವರ್ಷ ಜನವರಿಯಲ್ಲೂ ಬುರ್ಕಿನಾ ಫಾಸೋದ ಕೆಫೆಯೊಂದರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಮೂವತ್ತು ಮಂದಿ ಮೃತಪಟ್ಟಿದ್ದರು.
ಇದು ಜಿಹಾದಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದು, ಕೆಫೆ ಮೇಲೆ ಉಗ್ರರ ದಾಳಿ ಕುರಿತು ಮಾಹಿತಿ ಸಿಗುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದಿದ್ದು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos