ಸಂಗ್ರಹ ಚಿತ್ರ 
ವಿದೇಶ

ಶ್ರೀಲಂಕಾದಲ್ಲಿ ಅಕ್ರಮವಾಗಿ ನೆಲೆಯೂರಿದ್ದ 27 ಭಾರತೀಯರ ಬಂಧನ

ವೀಸಾ ಅವಧಿ ಮುಗಿದಿದ್ದರೂ ಶ್ರೀಲಂಕಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ 27 ಭಾರತೀಯರನ್ನು ಜಾಫ್ನಾದಲ್ಲಿ ಬಂಧನಕ್ಕೊಳಪಡಿಸಿರುವುದಾಗಿ ಶ್ರೀಲಂಕಾದ ವಲಸೆ...

ಕೊಲಂಬೋ: ವೀಸಾ ಅವಧಿ ಮುಗಿದಿದ್ದರೂ ಶ್ರೀಲಂಕಾದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿದ್ದ 27 ಭಾರತೀಯರನ್ನು ಜಾಫ್ನಾದಲ್ಲಿ ಬಂಧನಕ್ಕೊಳಪಡಿಸಿರುವುದಾಗಿ ಶ್ರೀಲಂಕಾದ ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. 
ದೇಶದ ಉತ್ತರ ಪ್ರಾಂತ್ಯದಲ್ಲಿ 27 ಭಾರತೀಯರು ವಾಸವಿದ್ದು ವಲಸೆ ಇಲಾಖೆ ಅಧಿಕಾರಿಗಳ ತನಿಖಾ ಸಂದರ್ಭದಲ್ಲಿ ಈ ವಿಚಾರ ತಿಳಿದುಬಂದಿತ್ತು. ಈ ವೇಳೆ ಐವರು ಮಹಿಳೆಯರು ಸೇರಿದಂದೆ ಒಟ್ಟು 27 ಮಂದಿ ಭಾರತೀಯರನ್ನು ಬಂಧನಕ್ಕೊಳಪಡಿಸಿದ್ದೇವೆಂದು ಹೇಳಿದ್ದಾರೆ.
ತಮ್ಮ ಪ್ರವಾಸಿ ವೀಸಾಗಳನ್ನು ಉಲ್ಲಂಘಿಸಿ ವ್ಯಾಪಾರ ಚಟುವಟಿಕೆಗಳಲ್ಲಿ ಭಾರತೀಯರು ತೊಡಗಿಕೊಂಡಿದ್ದು ಶೀಘ್ರದಲ್ಲಿಯೇ ಅವರನ್ನು ಗಡಿಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಜಾಫ್ನಾದಲ್ಲಿ ಮೂಲ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಕಳೆದ ಆಗಸ್ಟ್ 11 ರಂದು ಕೂಡ ಅಕ್ರಮವಾಗಿ ನೆಲೆಯೂರಿದ್ದಾರೆಂದು ಮೂವರು ಭಾರತೀಯರನ್ನು ಬಂಧಿಸಿತ್ತು. ಬಂಧಿತ ಭಾರತೀಯರ ಗುರುತನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran conflict: ತೈಲ ಸಾಗಣೆ ನಿಂತರೆ ಇದೂವರೆಗೆ ನಡೆಸಿದ್ದಕ್ಕಿಂತ 20 ಪಟ್ಟು ಹೆಚ್ಚು ದಾಳಿ: ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ

US-Iran war ಎಫೆಕ್ಟ್: ಪಾಕಿಸ್ತಾನದಲ್ಲಿ ಇಂಧನ ಸಂಕಷ್ಟ; ಶಾಲೆಗಳು 2 ವಾರ ಬಂದ್, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

Epic Fury: ಇರಾನ್‌ನಲ್ಲಿ ಸೈನಿಕ ಕಾರ್ಯಾಚರಣೆ ಸದ್ಯದಲ್ಲೇ ಅಂತ್ಯಗೊಳ್ಳಲಿದೆ: ಡೊನಾಲ್ಡ್ ಟ್ರಂಪ್

ಆಹಾರ, ಶೂ, ಸಮವಸ್ತ್ರ ಎಲ್ಲಾ ಸೌಲಭ್ಯಗಳಿದ್ದರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ: ಸರ್ಕಾರ ವಿಷಾದ

'ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದ್ದೇನೆ ಎಂದು ಬಹಿರಂಗಪಡಿಸುವುದಿಲ್ಲ, ಬೆಂಗಳೂರಿನಲ್ಲಿ ಶಾಸಕರಿಗೆ ಡಿನ್ನರ್ ಮೀಟಿಂಗ್ ಏರ್ಪಡಿಸಿದ್ದೇನೆ': ಡಿ ಕೆ ಶಿವಕುಮಾರ್-Video

SCROLL FOR NEXT