ವಿದೇಶ

ಐತಿಹಾಸಿಕ ಪೂರ್ಣ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾದ ಅಮೆರಿಕಾ

Raghavendra Adiga
ವಾಷಿಂಗ್ಟನ್: ನಕ್ಷತ್ರಗಳು ನಡು ಹಗಲಿನ ವೇಳೆ ಕಾಣಿಸಿಕೊಂಡವು. ಮೃಗಾಲಯದಲ್ಲಿ ಪ್ರಾಣಿಗಳು ವಿಚಿತ್ರವಾಗಿ ವರ್ತಿಸಿದವು ಹಕ್ಕಿಗಳು ಮೌನವಾಗಿ ನಿದ್ರೆಗೆ ಜಾರಿದವು ಸೋಮವಾರ ಅಮೆರಿಕಾದ ಭೂಮಿ ಮೇಲೆ ಕತ್ತಲು ಆವರಿಸಿತ್ತು. ಅಮೆರಿಕಾ ತನ್ನ ನೆಲದಲ್ಲಿ ಶತಮಾನದ ಮೊದಲ ಪೂರ್ಣ-ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಯಿತು.
ಗ್ರಹಣದ ದೃಷ್ಯವನ್ನು ಕಂಡು ಅಮೆರಿಕನ್ನರು ಆಶ್ಚರ್ಯಚಕಿತರಾದರು, ಒರೆಗಾನ್ ನಿಂದ ದಕ್ಷಿಣ ಕೆರೊಲಿನಾವರೆಗೆ 2,600 ಮೈಲುಗಳು (4,200 ಕಿಲೋಮೀಟರ್) ಸೂರ್ಯ ಗ್ರಹಣ ಗೋಚರಿಸಿತ್ತು. 
"ಇದು ಬಹಳ ವಿಶಿಷ್ಟ ಅನುಭವವಾಗಿತ್ತು," ನೆರಳು ಬೆಳಕಿನ ಬೆಳ್ಳಿಯ ರಿಂಗ್ನ್ನು ವೀಕ್ಷಿಸಿದ ವ ಪೋರ್ಟ್ ಲ್ಯಾಂಡ್ , ಒರೆಗಾನ್ ನ ಜೂಲಿ ವಿಗ್ಲ್ಯಾಂಡ್ ಹೇಳಿದರು.
ಈ ನೆರಳು ಬೆಳಕಿನ ಆಟವು 90 ನಿಮಿಷಗಳ ಕಾಲ ನಡೆಯಿತು. ಈ ಸಮಯದಲ್ಲಿ , ಚಂದ್ರ ಸೂರ್ಯನನ್ನು ಸುಮಾರು ಅವಧಿಯವರೆಗೆ ಮರೆ ಮಾಡುವುದರ ಮೂಲಕ ಗ್ರಹಣಕ್ಕೆ ಕಾರಣನಾಗಿದ್ದನು,
ಈ ಗ್ರಹಣವು, ಇತಿಹಾಸದಲ್ಲಿ ಹೆಚ್ಚು ವೀಕ್ಷಿಸಿದ ಮತ್ತು ಅತಿ ಹೆಚ್ಚು ಛಾಯಾಚಿತ್ರಿಸಿದ ಗ್ರಹಣ ಎಂದು ದಾಖಲಾಯಿತು, ಉಪಗ್ರಹಗಳು ಮತ್ತು ಎತ್ತರದ ಬಲೂನ್ ಗಳಿಂದ ಇದು ದಾಖಲಿಸಲ್ಪಟ್ಟಿತು ಟೆಲಿಸ್ಕೋಪ್ಗಳು, ಕ್ಯಾಮೆರಾಗಳು ಮತ್ತು ಕಾರ್ಡ್ ಬೋರ್ಡ್ ಪ್ರೇಮ್,  ರಕ್ಷಣಾತ್ಮಕ ಕನ್ನಡಕಗಳ ಮೂಲಕ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದರು
SCROLL FOR NEXT