ಮಿರ್ಗಿಯಾಸ್ ಶಿರಿನ್ಸ್ಕಿ 
ವಿದೇಶ

ಸುಡಾನ್ ನಲ್ಲಿ ರಷ್ಯಾದ ರಾಯಭಾರಿ ಸಾವು

ಸುಡಾನ್ ನ ರಷ್ಯಾ ರಾಯಭಾರಿಯು ತಮ್ಮ ಖಾರ್ಟೌಮ್ ನಿವಾಸದಲ್ಲಿ ಮೃತಪಟ್ಟಿದ್ದಾರೆ

ಕೈರೋ: ಸುಡಾನ್ ನ ರಷ್ಯಾ ರಾಯಭಾರಿಯು ತಮ್ಮ ಖಾರ್ಟೌಮ್ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ಸುದಾನ್ ಸುಡಾನ್ ವಿದೇಶಾಂಗ ಸಚಿವಾಲಯವು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸಚಿವಾಲಯವು ಸುನಾ ನ್ಯೂಸ್ ಏಜೆನ್ಸಿ ಗೆ ನೀಡಿದ ಹೇಳಿಕೆಯಲ್ಲಿ, ರಷ್ಯಾ ರಾಯಭಾರಿ ಮಿರ್ಗಿಯಾಸ್ ಶಿರಿನ್ಸ್ಕಿ ಬುಧವಾರ ಇಲ್ಲಿ ನಿಧನರಾಗಿದ್ದಾರೆ. ಇದಕ್ಕಾಗಿ ರಷ್ಯಾ ಸರ್ಕಾರ ಮತ್ತು ಅಲ್ಲಿನ ಜನರಿಗೆ ತಾನು ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದೆ
ಶಿರನ್ಸ್ಕಿ ಯವರ ರಾಜತಾಂತ್ರಿಕ ಕೆಲಸಗಳು ಎಂದಿನಂತೆಯೇ ನಡೆಯುತ್ತಿದ್ದು, ಅವರ ಸಾವಿನ ಕುರಿತಂತೆ ಯಾವ ಬಗೆಯ ಯಾವುದೇ ಅನುಮಾನಾಸ್ಪದ ವಿವರಗಳಿಲ್ಲ ಎಂದು ಸಚಿವಾಲಯವು ತಿಳಿಸಿದೆ.
60 ರ ವಯೋಮಾನದ ಶಿರಿನ್ಸ್ಕಿ ಅವರು 1977 ರಿಂದ ರಷ್ಯಾದ ರಾಜತಾಂತ್ರಿಕ ಸೇವೆಯಲ್ಲಿದ್ದರು ಮತ್ತು ಹಿಂದೆ ಯೆಮೆನ್, ಸೌದಿ ಅರೇಬಿಯಾ ಮತ್ತು ರುವಾಂಡಾದಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.
ಅವರನ್ನು 2013 ರಲ್ಲಿ ಸುಡಾನ್ ರಾಯಭಾರಿಯಾಗಿ ನೇಮಕ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!