ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಟ್ರಂಪ್ ಕೆಣಕಿದ ಕಿಮ್ ಜಾಂಗ್ ಉನ್: ಮತ್ತೆ 3 ಅಣ್ವಸ್ತ್ರ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ವಿಶ್ವದ ದೊಡ್ಡಣ್ಣ ಅಮೆರಿಕಗೆ ಸೆಡ್ಡು ಹೊಡೆದಿರುವ ಯುದ್ಧೋನ್ಮತ್ತ ಉತ್ತರ ಕೊರಿಯಾ ಮತ್ತೆ ಮೂರು ಅಣ್ವಸ್ತ್ರ ಕ್ಷಿಪಣಿಗಳನ್ನು ಪ್ರಯೋಗಿಸಿದೆ...

ಡೊನಾಲ್ಡ್ ಟ್ರಂಪ್-ಕಿಮ್ ಜಾಂಗ್ ಉನ್
Vishwanath S
Updated On : 26 Aug 2017, 2:09 am
ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಗೆ ಸೆಡ್ಡು ಹೊಡೆದಿರುವ ಯುದ್ಧೋನ್ಮತ್ತ ಉತ್ತರ ಕೊರಿಯಾ ಮತ್ತೆ ಮೂರು ಅಣ್ವಸ್ತ್ರ ಕ್ಷಿಪಣಿಗಳನ್ನು ಪ್ರಯೋಗಿಸಿದೆ. 
ವಿಶ್ವಸಂಸ್ಥೆ ಮತ್ತು ಜಗತ್ತಿನ ಶಕ್ತಿ ಶಾಲಿ ರಾಷ್ಟ್ರಗಳ ಎಚ್ಚರಿಕೆಯ ನಡುವೆಯೂ ಪಯೊಂಗ್ ಯಾಂಗ್ ಮೂರು ಅಣ್ವಸ್ತ್ರ ಕ್ಷಿಪಣಿಗಳನ್ನು ಪೂರ್ವ ಸಮುದ್ರದತ್ತ ಉಡಾಯಿಸಿ ಪುನಃ ಭೀತಿಯ ವಾತಾವರಣ ಮೂಡಿಸಿದೆ. ಇನ್ನು ಉತ್ತರ ಕೊರಿಯಾ ಮೂರು ಕ್ಷಿಪಣಿಗಳ ಪ್ರಯೋಗ ನಡೆಸಿರುವುದನ್ನು ಅಮೆರಿಕ ಮಿಲಿಟರಿ ಮತ್ತು ದಕ್ಷಿಣ ಕೊರಿಯಾದ ಉನ್ನತಾಧಿಕಾರಿಗಳು ಖಚಿತಪಡಿಸಿದ್ದಾರೆ. 
ಉತ್ತರ ಕೊರಿಯಾ ಉಡಾಯಿಸಿರುವ ಮೂರು ಖಂಡಾಂತರ ಕ್ಷಿಪಣಿಗಳು ಅಲ್ಪ ಸಾಮರ್ಥ್ಯದ ಹೊಂದಿದ್ದು ಮೊದಲ ಎರಡು ಕ್ಷಿಪಣಿಗಳು ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಿದ್ದವು. ಇನ್ನು ಮೂರನೇ ಕ್ಷಿಪಣಿ ಕರಾರುವಕ್ಕಾಗಿ ನಿಗದಿದ ಸ್ಥಳ ತಲುಪಿ ಸ್ಫೋಟಗೊಂಡಿತು ಎಂದು ಅಮೆರಿಕ ಪೆಸಿಫಿಕ್ ಕಮ್ಯಾಂಡ್ ಹೇಳಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement