ಸೌಧಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್
ಸೌದಿ ಅರೇಬಿಯಾ: ಸಾಮಾಜಿಕ ಸುಧಾರಣೆಗಳಿಗೆ ಪಣ ತೊಟ್ಟಿರುವ ಸೌದಿ ರಾಜ ಇದೀಗ ಸಿನಿಮಾ ಮೇಲಿನ ಸುದೀರ್ಘ ನಿರ್ಬಂಧವನ್ನು ತೆರವುಗೊಳಿಸಿದ್ದಾರೆ.
2018ರಿಂದ ಸೌಧಿಯಲ್ಲಿ ವಾಣಿಜ್ಯ ಚಲನಚಿತ್ರಗಳು ತೆರೆಕಾಣಲಿವೆ. 35 ವರ್ಷಗಳ ಸುದೀರ್ಘ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಸಂಸ್ಕೃತಿ ಮತ್ತು ಮಾಹಿತಿ ಸಚಿವಾಲಯ ಸ್ಪಷ್ಟಪಡಿಸಿದ್ದು ಈ ಕೂಡಲೇ ಸರ್ಕಾರ ಚಿತ್ರಮಂದಿರಗಳಿಗೆ ಪರವಾನಗಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪ್ರದಾಯವಾದಿಗಳ ವಿರೋಧದ ಹೊರತಾಗಿಯೂ "ವಿಷನ್ 2030" ಭಾಗವಾಗಿ ಚಿತ್ರಮಂದಿರಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಸಮಗ್ರ ಸುಧಾರಣೆಯ ಯೋಜನೆಯ ಭಾಗವಾಗಿ ಮನರಂಜನೆಯನ್ನು ಉತ್ತೇಜಿಸುವ ರಾಜ್ಯದಲ್ಲಿ ಒಂದು ಮಾದರಿ ಬದಲಾವಣೆಯನ್ನು ತರಲಾಗುವುದು ಎಂದು ಸರ್ಕಾರ ಹೇಳಿದೆ.
ಸೌಧಿಯಲ್ಲಿ ಸಾಂಸ್ಕೃತಿಕ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಾಹಿತಿ ಸಚಿವ ಅವ್ವಾದ್ ಅಲ್ವಾವಾದ್ ಹೇಳಿದ್ದಾರೆ.