ಫಿಲಿಪ್ಪೀನ್ಸ್ ನಲ್ಲಿ ಭೀಕರ ಚಂಡಮಾರುತ, 180ಕ್ಕೂ ಹೆಚ್ಚು ಸಾವು
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಬೀಸಿದ ‘ತೆಂಬಿನ್’ ಚಂಡಮಾರುತದ ಪರಿಣಾಮ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿದೆ. ಈ ಪ್ರಕೃತಿ ವಿಕೋಪದಿಂದ ಸುಮಾರು 180 ಮಂದಿ ಸಾವನ್ನಪ್ಪಿದ್ದಾರೆ.
ಫಿಲಿಪ್ಪೀನ್ಸ್ ನ ಮಿಂಡಾನಾವೋ ದ್ವೀಪದಲ್ಲಿ ಈ ಚಂದಮಾರುತದ ಹಾವಳಿ ನಡೆದಿದ್ದು ಘಟನೆಯಲ್ಲಿ 160 ಮಂದಿ ನಾಪತ್ತೆಯಾಗಿದ್ದಾರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವು ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾದ್ಯತೆಗಳಿವೆ. ಕಾಣೆಯಾದವರಿಗಾರಿ ಶೋಧಕಾರ್ಯ ಮುಂದುವರಿದಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂ ಕುಸಿತದಿಂದ ನಾಶವಾಗಿದ್ದ ಸಂವಹನ ಮತ್ತು ಸಂಪರ್ಕ ವ್ಯವಸ್ಥೆಯನ್ನು ಮರು ಸ್ಥಾಪಿಸಲಾಗಿದೆ
ಸುಲು ಸಮುದ್ರದ ಭಾಗದಿಂದ ಚಂದಮಾರುತ ಸೃಷ್ಟಿಯಾಗಿದ್ದು ಕೈ–ಟಕ್‘ ಚಂಡಮಾರುತ ಬೀಸಿದ ಕೆಲವೇ ದಿನಗಳ ಅಂತರದಲ್ಲಿ ಮತ್ತೆ ಚಂದಮಾರುತದ ಹಾವಳಿಗೆ ತುತ್ತಾಗಿರುವ ಫಿಲಿಪ್ಪೀನ್ಸ್ ಅಕ್ಷರಶಃ ನರಕದಂತಾಗಿದೆ