ಲಾಹೋರ್: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಲಾಹೋರ್ ನಲ್ಲಿ ತನ್ನ ರಾಜಕೀಯ ಪಕ್ಷ ಮಿಲ್ಲಿ ಮುಲ್ಸಿಮ್ ಲೀಗ್ (ಎಂಎಂಎಲ್) ಕಚೇರಿಯನ್ನು ಲಾಹೋರ್ ನಲ್ಲಿ ಉದ್ಘಾಟಿಸಿದ್ದಾನೆ.
ಪಾಕಿಸ್ತಾನ ಸರ್ಕಾರದ ನಿರಂತರ ಎಚ್ಚರಿಕೆಯ ಹೊರತಾಗಿಯೂ ಹಫೀಜ್ ಸಯೀದ್ ರಾಜಕೀಯ ಪಕ್ಷದ ಕಚೇರಿಯನ್ನು ಉದ್ಘಾಟಿಸಿದ್ದಾನೆ. ಜೆಯುಡಿ ಉಗ್ರ ಸಂಘಟನೆಯ ರಾಜಕೀಯ ಪಕ್ಷವಾಗಿ ಮಿಲ್ಲಿ ಮುಸ್ಲಿಂ ಲೀಗ್ ಅಸ್ತಿತ್ವ ಪಡೆದುಕೊಂಡಿದೆ.
ಕಛೇರಿ ಉದ್ಘಾಟನೆ ಮಾಡಿದ ಬಳಿಕ ಹಫೀಜ್ ಸಯೀದ್ ಜನರ ಸಮಸ್ಯೆಗಳನ್ನು ಆಲಿಸಿದ್ದಾನೆ ಎಂದು ಪಾಕಿಸ್ತಾನ ಪತ್ರಿಕೆ ಡಾನ್ ವರದಿ ಪ್ರಕಟಿಸಿದೆ. ವಿಶ್ವಸಂಸ್ಥೆ ಉಗ್ರರ ಪಟ್ಟಿಯಲ್ಲಿರುವ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ನ್ನು ರಾಜಕೀಯ ಪಕ್ಷವಾಗಿ ನೋಂದಣಿ ಮಾಡುವುದಕ್ಕೆ ಪಾಕಿಸ್ತಾನ ಸರ್ಕಾರದ ಆಂತರಿಕ ಸಚಿವಾಲಯ ವಿರೋಧ ವ್ಯಕ್ತಪಡಿಸಿದೆ.