ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನ ಹೊಸ ಯೋಜನೆಗೆ ಪ್ಯಾಲೆಸ್ತೇನ್ ವಿರೋಧ
ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನಿರ್ಮಿಸಲು ಉದ್ದೇಶಿಸಿರುವ 300,000 ಹೊಸ ವಸಾಹತು ಘಟಕಗಳ ಯೋಜನೆಗೆ ಪ್ಯಾಲೆಸ್ತೇನ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ರಾಮಲ್ಲಾ: ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನಿರ್ಮಿಸಲು ಉದ್ದೇಶಿಸಿರುವ 300,000 ಹೊಸ ವಸಾಹತು ಘಟಕಗಳ ಯೋಜನೆಗೆ ಪ್ಯಾಲೆಸ್ತೇನ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಶಾಂತಿ ಪ್ರಕ್ರಿಯೆಯ ಸಮಗ್ರವಾಗಿ ಪುನಃಪರಿಶೀಲಿಸುವುದನ್ನು ಪರಿಗಣಿಸುವ ಭರವಸೆ ನೀಡಿರುವ ಪ್ಯಾಲೆಸ್ತೇನ್, ಈಸ್ಟ್ ಜೆರುಸಲೇಮ್ ನಲ್ಲಿ ಇಸ್ರೇಲ್ ನ ಹೊಸ ಯೋಜನೆಗಳು ಇಸ್ರೇಲ್ ನ ವಸಾಹತು ಹಾಗೂ ವಿಸ್ತರಣಾವಾದದ ಯೋಜನೆಗಳಾಗಿದ್ದು ಜೆರುಸಲೇಮ್ ನ್ನು ಇಸ್ರೇಲ್ ನ ರಾಜಧಾನಿಯಾಗಿ ಘೋಷಿಸುವ ಅಮೆರಿಕದ ಹೇಳಿಕೆಯಿಂದ ಇಸ್ರೇಲ್ ನ ಸರ್ಕಾರ ಉತ್ತೇಜನ ಪಡೆದುಕೊಂಡಿದೆ ಎಂದು ಹೇಳಿದೆ.
ಪ್ಯಾಲೆಸ್ತೇನ್ ನ ವಿಷಯದಲ್ಲಿ ಇಸ್ರೇಲ್ ಮುಂದಿನ ಯಾವುದೇ ಕ್ರಮ ತೆಗೆದುಕೊಂಡರೂ ಅದಕ್ಕೆ ಟ್ರಂಪ್ ಹೊಣೆಯಾಗಿರುತ್ತಾರೆ ಎಂದು ಪ್ಯಾಲೆಸ್ತೇನ್ ನ ವಿದೇಶಾಂಗ ಇಲಾಖೆ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.