ಸ್ಯಾನ್ ಫ್ರೋನ್ಸಿಕೋ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿನ ಕೆಲ ದ್ವೇಷ ಪೂರಿತ ಭಾಷಣಗಳನ್ನು ತೆಗೆದು ಹಾಕುವುದರಲ್ಲಿನ ಕೆಲ ತಪ್ಪುಗಳನ್ನು ಬಳಕೆದಾರರು ಬಹಿರಂಗಪಡಿಸಿದ್ದು ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಕ್ಷಮೆಯಾಚಿಸಿದೆ.
ಪ್ರೊಪಬ್ಲಿಕ ಸಂಸ್ಥೆಯೊಂದು ನಡೆಸಿದ ತನಿಖೆಯಲ್ಲಿ ವಿಷಯದ ವಿಮರ್ಶಕರು ಎಂದು ಕರೆಯಲ್ಪಡುವ ಫೇಸ್ ಬುಕ್ ಸೆನ್ಸಾರ್ ಗಳು ದ್ವೇಷ ಪೂರಿತ ಪೋಸ್ಟ್ ಗಳ ಜತೆಗೆ ಒಳ್ಳೆಯ ಪೋಸ್ಟ್ ಗಳನ್ನು ಡಿಲೀಟ್ ಮಾಡಿದೇ ಎಂಬುದು ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದೆ.
ಅಮೆರಿಕದ ಮೂಲದ ಲಾಭರಹಿತ ತನಿಖಾ ಸುದ್ದಿಪತ್ರಿಕೆಯೊಂದು 900 ಪೋಸ್ಟ್ ಗಳ ವಿಶ್ಲೇಷಣೆ ನಡೆಸಿತ್ತು. ಇವುಗಳಲ್ಲಿ ಫೇಸ್‌ಬುಕ್‌ನಲ್ಲಿನ ವಿಷಯ ವಿಮರ್ಶಕರು ಸಾಮಾನ್ಯವಾಗಿ ಒಂದೇ ರೀತಿಯ ವಿಷಯದೊಂದಿಗೆ ಪೋಸ್ಟ್ ಗಳ ಮೇಲೆ ವಿಭಿನ್ನ ಕರೆಗಳನ್ನು ಮಾಡುತ್ತಾರೆ ಮತ್ತು ಯಾವಾಗಲೂ ಕಂಪನಿಯ ಮಾರ್ಗದರ್ಶನಗಳು ಅನುಸರಿಸುವುದಿಲ್ಲ ಎಂಬುದನ್ನು ಕಂಡು ಬಂದಿತ್ತು.
ಫೇಸ್ ಬುಕ್ ತನ್ನ ದ್ವೇಷ-ಭಾಷಣ ನಿಯಮಗಳನ್ನು ಹೇಗೆ ಕಾರ್ಯರೂಪಕ್ಕೆ ತರುತ್ತದೆ ಎಂಬುದನ್ನು ತಿಳಿಯುವ ಸಲುವಾಗಿ ಒಂದು ವರ್ಗ ಕೆಲ ಪೋಸ್ಟ್ ಗಳನ್ನು ಪ್ರೊಪಬ್ಲಿಕಾಗೆ ತನಿಖೆಯ ಭಾಗವಾಗಿ ಸಲ್ಲಿಸಿತ್ತು. ಈ ತನಿಖೆಯಲ್ಲಿ ಆಘಾತಕಾರಿ ವಿಷಯ ತಿಳಿದುಬಂದಿದ್ದರಿಂದ ಪ್ರೊಪಬ್ಲಿಕ 49 ಪೋಸ್ಟ್ ಗಳ ಕುರಿತು ವಿವರಣೆ ನೀಡುವಂತೆ ಸೂಚಿಸಿತ್ತು. ಇವೆಲ್ಲವನ್ನು ಪರಿಶೀಲನೆ ನಡೆಸಿದ ನಂತರ ಫೇಸ್ ಬುಕ್ ಗೆ ತನ್ನ ತಪ್ಪಿನ ಅರಿವಾಗಿದೆ.