ಡಾನಾಲ್ಡ್ ಟ್ರಂಪ್ 
ವಿದೇಶ

ನಾನು ತಮಾಷೆಗೆ ಹೇಳುತ್ತಿರಲಿಲ್ಲ, ಗೋಡೆಯ ವಿನ್ಯಾಸ ಪ್ರಕ್ರಿಯೆ ನಡೆಯುತ್ತಿದೆ: ಡೊನಾಲ್ಡ್ ಟ್ರಂಪ್

ಮೆಕ್ಸಿಕೊ ಜೊತೆ ದಕ್ಷಿಣದ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ವಿನ್ಯಾಸದ ಪ್ರಕ್ರಿಯೆ...

ವಾಷಿಂಗ್ಟನ್: ಮೆಕ್ಸಿಕೊ ಜೊತೆ ದಕ್ಷಿಣದ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ವಿನ್ಯಾಸದ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಗೋಡೆಯ ವಿನ್ಯಾಸ ಕಾರ್ಯ ನಡೆಯುತ್ತಿದೆ. ಗೋಡೆ ನಿರ್ಮಾಣದ ಬಗ್ಗೆ ಡೊನಾಲ್ಡ್ ಟ್ರಂಪ್ ತಮಾಷೆ ಮಾಡುತ್ತಿದ್ದಾರೆ ಎಂದು ಅನೇಕ ಮಂದಿ ಹೇಳುತ್ತಾರೆ. ನಾನು ತಮಾಷೆ ಮಾಡಿರಲಿಲ್ಲ, ನಾನು ತಮಾಷೆ ಮಾಡುವುದೂ ಇಲ್ಲ ಎಂದು ನಿನ್ನೆ ಶ್ವೇತಭವನದಲ್ಲಿ ಕೌಂಟಿ ಶೆರಿಫ್ಸ್ ಸಭೆಯಲ್ಲಿ ಹೇಳಿದರು.
ಗಡಿಯ ಮೂಲಕ ಮಾದಕ ವಸ್ತುಗಳ ಕಳ್ಳ ಸಾಗಣೆ ಮತ್ತು ಅಕ್ರಮ ವಲಸಿಗರನ್ನು ತಡೆಯಲು ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಭರವಸೆಯಂತೆ ಗೋಡೆ ನಿರ್ಮಾಣ ಅತ್ಯಂತ ಅಗತ್ಯವಾಗಿದೆ ಎಂದರು.
ಕೆಲವರು ನಾನು ತಮಾಷೆ ಮಾಡುತ್ತಿದ್ದೇನೆ ಎನ್ನುತ್ತಾರೆ. ಇಲ್ಲ, ನಾನು ತಮಾಷೆ ಮಾಡುವುದಿಲ್ಲ. ನಾವು ಗೋಡೆ ನಿರ್ಮಿಸಿಯೇ ನಿರ್ಮಿಸುತ್ತೇವೆ, ಇದು ಬಹುದೊಡ್ಡ ಗೋಡೆಯಾಗಿದ್ದು ಇದರಿಂದ ಬಹಳ ಪ್ರಯೋಜನವಿದೆ ಎಂದು ಹೇಳಿದರು.
ಅಮೆರಿಕಾ-ಮೆಕ್ಸಿಕೋ ಗಡಿಯಲ್ಲಿ ನಿರ್ಮಿಸುವ ಗೋಡೆಯಿಂದ ಏನಾದರೂ ಪ್ರಯೋಜನವಿದೆಯೇ ಎಂದು ಇಸ್ರೇಲ್ ನ್ನು ಕೇಳಿ, ಅದನ್ನು ಸರಿಯಾಗಿ ನಿರ್ಮಿಸಿದರೆ ಅದರಿಂದ ಉಪಯೋಗವಿದೆ. ಭಯೋತ್ಪಾದನೆ ಗುಂಪನ್ನು ನಾಶಮಾಡಿ ನಮ್ಮ ನಾಗರಿಕರನ್ನು ರಕ್ಷಿಸಲು ಇದು ಸಮಯವಾಗಿದೆ. ಅಮೆರಿಕಾದ ಯುವ ನಾಗರಿಕರು ಸಭ್ಯತೆ, ಘನತೆ, ಪ್ರೀತಿ ಮತ್ತು ಬೆಂಬಲದ ವಾತಾವರಣದಲ್ಲಿ ಬೆಳೆಯಲು ಇದು ಸರಿಯಾದ ಸಮಯವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ