ವಿದೇಶ

ಟ್ರಂಪ್ ವಲಸೆ ಆದೇಶಕ್ಕೆ ಅನುಮತಿ ನೀಡಲು ಫೆಡರಲ್ ಕೋರ್ಟ್ ನಕಾರ

Srinivas Rao BV
ವಾಷಿಂಗ್ ಟನ್: ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಅಮೆರಿಕಾ ಪ್ರವೇಶಿಸುವುದಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿದ್ದ ಡೊನಾಲ್ಡ್ ಟ್ರಂಪ್ ಅವರ ಆದೇಶವನ್ನು ಜಾರಿಗೊಳಿಸುವುದಕ್ಕೆ ಅನುಮತಿ ನೀಡಲು ಅಮೆರಿಕಾದ ಫೆಡರಲ್ ಕೋರ್ಟ್ ನಿರಾಕರಿಸಿದೆ. 
ಟ್ರಂಪ್ ಆದೇಶವನ್ನು ತಡೆಹಿದಿಡಿದ್ದ ಫೆಡರಲ್ ಕೋರ್ಟ್ ನ ನ್ಯಾಯಾಧೀಶರ ತ್ರಿಸದಸ್ಯ ಸಮಿತಿ ಆದೇಶವನ್ನು ಪುನರ್ ಸ್ಥಾಪಿಸಲು ನಿರಾಕರಿಸಿದ್ದು, ಡೊನಾಲ್ಡ್ ಟ್ರಂಪ್ ಆದೇಶದ ಹೊರತಾಗಿಯೂ ಇರಾನ್, ಇರಾಕ್, ಯೆಮೆನ್, ಲಿಬಿಯಾ, ಸುಡಾನ್, ಸೊಮಾಲಿಯಾದ ಪ್ರಜೆಗಳು ಅಮೆರಿಕಾ ಪ್ರವೇಶಿಸಬಹುದು ಎಂದು ಹೇಳಿದೆ. 
ಅಮೆರಿಕಾದ ಮೇಲೆ ಭಯೋತ್ಪಾದಕ ದಾಳಿ ನಡೆಸಿದವರ ಪೈಕಿ ಟ್ರಂಪ್ ಪಟ್ಟಿಯಲ್ಲಿರುವ 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಲ್ಲ. ಆದ್ದರಿಂದ 7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಿಸದಂತೆ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿರುವುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 
SCROLL FOR NEXT