ಸಿಡ್ನಿ: ೧೯೮೦ ರಿಂದ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಆಸ್ಟ್ರೇಲಿಯಾದ ಕ್ಯಾಥಲಿಕ್ ಚರ್ಚ್ ೨೧೩ ಮಿಲಿಯನ್ ಡಾಲರ್ ಪರಿಹಾರ ನೀಡಿದೆ ಎಂದು ಗುರುವಾರ ತನಿಖೆಯಿಂದ ಬಹಿರಂಗಗೊಂಡಿದೆ.
ಈ ಹಣವನ್ನು ಸಾವಿರಾರು ಸಂತ್ರಸ್ತರಿಗೆ ಹಂಚಲಾಗಿದೆ ಎಂದು ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಾಗಿ ಇರುವ ರಾಯಲ್ ಕಮಿಷನ್ ತನಿಖೆ ನಡೆಸಿ ನೀಡಿರುವ ವರದಿಯಲ್ಲಿ ತಿಳಿಸಿದೆ.
ಸಂತ್ರಸ್ತರಿಗೆ ಸರಾಸರಿ ಪರಿಹಾರ ೭೦,೦೦೦ ಡಾಲರ್ ದೊರೆತಿದೆ ಎಂದು ಮಾಹಿತಿಯಿರುವುದಾಗಿ ಬಿಬಿಸಿ ವರದಿ ಮಾಡಿದೆ.
೧೯೮೦ ರಿಂದ ೨೦೧೫ ರವರೆಗೆ ದೂರಲಾಗಿರುವ ೪,೪೪೫ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ, ೩೦೬೬ ಪ್ರಕರಣಗಳಿಗೆ ಕ್ಯಾಥಲಿಕ್ ಚರ್ಚ್ ಪರಿಹಾರ ನೀಡಿದೆ. ಈ ಪರಿಹಾರದಲ್ಲಿ ಚಿಕಿತ್ಸೆ, ಕಾನೂನು ವೆಚ್ಚ ಮತ್ತು ಇತರ ವೆಚ್ಚಗಳು ಸೇರಿವೆ ಎಂದು ಸಿಡ್ನಿಯಲ್ಲಿ ರಾಯಲ್ ಕಮಿಷನ್ ಪರ ವಕೀಲ ಗೈಲ್ ಫರ್ನೇಸ್ ಹೇಳಿದ್ದಾರೆ.
"ಇಂತಹ ದೌರ್ಜನ್ಯಗಳು ನಡೆದ ಮೇಲೆ ಸಂತ್ರಸ್ತರಿಗೆ ಚರ್ಚ್ ಮತ್ತು ಅಧಿಕಾರಿಗಳ ವಿರುದ್ಧ ದೂರು ನೀಡಲು ಹಲವು ಆತಂಕಗಳಿರುತ್ತವೆ ಎಂದು ಕಮಿಷನ್ ಗೆ ತಿಳಿದುಬಂದಿದೆ" ಎಂದು ಕೂಡ ಫರ್ನೇಸ್ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆದು ನಂತರ ದೂರು ಕೊಡುವುದಕ್ಕೆ ಘಟಿಸುವ ಸಮಯ ಸರಾಸರಿ ೩೩ ವರ್ಷಗಳು ತಡವಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.
೧೯೫೦ ರಿಂದ ೨೧೦೧ ರೊಳಗೆ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ದೂರಲಾಗಿರುವ ದೇಶದ ೭% ಕ್ಯಾಥಲಿಕ್ ಪ್ರೀಸ್ಟ್ ಗಳನ್ನು ಒಂದು ತಿಂಗಳ ಹಿಂದೆ ಕಮಿಷನ್ ವಿಚಾರಣೆ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics