ಬಾಕ್ಸರ್ ದಂತಕಥೆ ಮುಹಮ್ಮದ್ ಅಲಿ ಪುತ್ರ 
ವಿದೇಶ

ನೀವು ಮುಸಲ್ಮಾನರಾ? ವಿಮಾನ ನಿಲ್ದಾಣದಲ್ಲಿ ಮುಹಮ್ಮದ್ ಅಲಿಯ ಪುತ್ರನನ್ನು ವಿಚಾರಣೆ ನಡೆಸಿದ ಭದ್ರತಾ ಸಿಬ್ಬಂದಿ

ಬಾಕ್ಸರ್ ದಂತಕಥೆ ಮುಹಮ್ಮದ್ ಅಲಿಯವರ ಪುತ್ರನನ್ನು ಪ್ಲೋರಿಡಾ ವಿಮಾನ ನಿಲ್ದಾಣದಲ್ಲಿ ವಲಸೆ...

ನ್ಯೂಯಾರ್ಕ್:  ಬಾಕ್ಸರ್ ದಂತಕಥೆ  ಮುಹಮ್ಮದ್ ಅಲಿಯವರ ಪುತ್ರನನ್ನು ಪ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಅನೇಕ ತಾಸುಗಳವರೆಗೆ ವಿಚಾರಣೆ ನಡೆಸಿದ ಘಟನೆ ನಡೆದಿದೆ. ಅಲ್ಲದೆ ಅವರ ಧರ್ಮದ ಬಗ್ಗೆ ಅಧಿಕಾರಿಗಳು ಹಲವು ಬಾರಿ ಪ್ರಶ್ನೆ ಕೇಳಿದ್ದಾರೆ.
44 ವರ್ಷದ  ಮುಹಮ್ಮದ್ ಅಲಿ ಜ್ಯೂನಿಯರ್ ಮತ್ತು ಅವರ ತಾಯಿ ಖಲಿಲಾಲ್ ಕಮಕೊ-ಅಲಿ ಫೆಬ್ರವರಿ 7ರಂದು ಜಮೈಕಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಫೋರ್ಟ್ ಲಾಡರ್ಡೇಲ್-ಹಾಲಿವುಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರ ಹೆಸರಿನಲ್ಲಿ ಅರೆಬಿಕ್ ಇರುವುದರಿಂದ ವಿಚಾರಣೆ ಸಮಯದಲ್ಲಿ ಪಕ್ಕಕ್ಕೆ ತಳ್ಳಲಾಯಿತು. ತಡವಾಗಿ ತಪಾಸಣೆ ಮಾಡಲಾಯಿತು ಎಂದು ಅವರ ಕುಟುಂಬ ಸ್ನೇಹಿತ, ವಕೀಲ ಕ್ರಿಸ್ ಮನ್ಸಿನಿ ತಿಳಿಸಿದ್ದಾರೆ.
ಜ್ಯೂನಿಯರ್ ಮುಹಮ್ಮದ್ ಅವರ ತಾಯಿ ಮೊಹಮ್ಮದ್ ಆಲಿಯವರ ಮೊದಲ ಪತ್ನಿ ಕಮಕೊ ಅಲಿ  ತನ್ನ ಮಾಜಿ ಪತಿಯ ಫೋಟೋ ತೋರಿಸಿದಾಗ ಒಳಗೆ ಹೋಗಲು ಬಿಟ್ಟರು. ಆದರೆ ಪುತ್ರ ಮಾತ್ರ ಎರಡು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ನಿಲ್ಲಬೇಕಾಯಿತು. ಅಧಿಕಾರಿಗಳು, ನಿಮಗೆ ಹೇಗೆ ಈ ಹೆಸರು ಬಂತು, ನೀವು ಮುಸಲ್ಮಾನರಾ ಎಂದು ಪದೇ ಪದೇ ಕೇಳಿದ್ದಾರೆ.
ಹೌದು ತಾವು ಮುಸಲ್ಮಾನ ಎಂದು ಹೇಳಿದ್ದಕ್ಕೆ ಅಧಿಕಾರಿಗಳು ಮತ್ತೆ ಮತ್ತೆ ಅವರ ಧರ್ಮ ಮತ್ತು ಅವರು ಹುಟ್ಟಿದ್ದು ಎಲ್ಲಿ ಎಂದು ಕೇಳಿದ್ದಾರೆ.
ಈ ಬಗ್ಗೆ ಕಾನೂನಿನ ಮೂಲಕ ಕೇಸು ದಾಖಲಿಸಲು ಮನ್ಸಿನಿ ಮತ್ತು ಅಲಿ ಕುಟುಂಬ ಪ್ರಯತ್ನಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

SCROLL FOR NEXT