ಮೆಕ್ಸಿಕೋ-ಅಮೆರಿಕ ಗಡಿ 
ವಿದೇಶ

ಗೋಡೆ ನಿರ್ಮಾಣಕ್ಕೆ ವೆಚ್ಚ ಭರಿಸುವುದರ ವಿರುದ್ಧ ಅಮೆರಿಕಾಗೆ ಮೆಕ್ಸಿಕೋ ಎಚ್ಚರಿಕೆ

ಮೆಕ್ಸಿಕೋ-ಅಮೆರಿಕಾ ನಡುವೆ ಗೋಡೆ ನಿರ್ಮಿಸುವ ಯೋಜನೆಗೆ ತಗುಲುವ ವೆಚ್ಚವನ್ನು ವಾಪಸ್ ಪಡೆಯಲು ಮೆಕ್ಸಿಕೋಗೆ ರಫ್ತು ಮಾಡುವ ಸರಕುಗಳ ಮೇಲೆ ಏಕಪಕ್ಷೀಯ ತೆರಿಗೆ ವಿಧಿಸುವುದನ್ನು ಮೆಕ್ಸಿಕೋ ವಿರೋಧಿಸಿದೆ.

ಮೆಕ್ಸಿಕೋ: ಮೆಕ್ಸಿಕೋ-ಅಮೆರಿಕಾ ನಡುವೆ ಗೋಡೆ ನಿರ್ಮಿಸುವ ಯೋಜನೆಗೆ ತಗುಲುವ ವೆಚ್ಚವನ್ನು ವಾಪಸ್ ಪಡೆಯಲು ಮೆಕ್ಸಿಕೋಗೆ ರಫ್ತು ಮಾಡುವ ಸರಕುಗಳ ಮೇಲೆ ಏಕಪಕ್ಷೀಯ ತೆರಿಗೆ ವಿಧಿಸುವುದನ್ನು ಮೆಕ್ಸಿಕೋ ವಿರೋಧಿಸಿದೆ. 
ಅಮೆರಿಕಾಗೆ ಎಚ್ಚರಿಕೆ ನೀಡಿರುವ ಮೆಕ್ಸಿಕೋ ತಾನೂ ಸಹ ಅದೇ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಹೇಳಿದೆ. ಅಮೆರಿಕ ಏಕಪಕ್ಷೀಯ ತೆರಿಗೆ ವಿಧಿಸುವುದರ ಬಗ್ಗೆ ಮಾತನಾಡಿರುವ ಮೆಕ್ಸಿಕೋದ ವಿದೇಶಾಂಗ ಸಚಿವ ಮೆಕ್ಸಿಕೋ ರಫ್ತನ್ನು ಅವಲಂಬಿಸಿರುವ ಅಮೆರಿಕಾದ ರಾಜ್ಯಗಳಿಗೆ ಮೆಕ್ಸಿಕೋ ಸರ್ಕಾರ ಸಹ ನಿರ್ದಿಷ್ಟ ಸರಕುಗಳಿಗೆ ಏಕಪಕ್ಷೀಯ ತೆರಿಗೆಯನ್ನು ವಿಧಿಸಬಹುದು ಎಂದು ಎಚ್ಚರಿಸಿದ್ದಾರೆ. 
ನಿಗದಿಗಿಂತಲೂ ಮುಂಚಿತವಾಗಿಯೇ ಗೋಡೆ ನಿರ್ಮಿಸಲು ಹೊರಟಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಮಾರ್ಚ್ ನಿಂದ ಗೋಡೆ ನಿರ್ಮಾಣಕ್ಕೆ ವಿನ್ಯಾಸಗಳನ್ನು ಪಡೆಯಲು ಪ್ರಾರಂಭಿಸಲಿದೆ ಎಂದು ಟ್ರಂಪ್ ಆಡಳಿತ ತಿಳಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT