ಅಮೆರಿಕಾದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ 
ವಿದೇಶ

'ಅಮೆರಿಕಾದ ಇಂದಿನ ಸ್ಥಿತಿಗೆ ವೈವಿಧ್ಯತೆಯೇ ಕಾರಣ': ಮಿಶೆಲ್ ಒಬಾಮ

'ವೈಭವಯುತ ವೈವಿದ್ಯತೆ ನಮ್ಮ ಇಂದಿನ ಸ್ಥಿತಿಗೆ ಬೆದರಿಕೆ ಅಲ್ಲ ಬದಲಾಗಿ ನಮ್ಮ ಒಳ್ಳೆಯ ಸ್ಥಿತಿಗೆ ಕಾರಣ' ಎಂದು ನನಪಿಸಿಕೊಳ್ಳಲು ಅಮೆರಿಕಾ ಜನತೆಗೆ ದೇಶದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಕರೆ

ವಾಷಿಂಗ್ಟನ್: 'ವೈಭವಯುತ ವೈವಿದ್ಯತೆ ನಮ್ಮ ಇಂದಿನ ಸ್ಥಿತಿಗೆ ಬೆದರಿಕೆ ಅಲ್ಲ ಬದಲಾಗಿ ನಮ್ಮ ಒಳ್ಳೆಯ ಸ್ಥಿತಿಗೆ ಕಾರಣ' ಎಂದು ನನಪಿಸಿಕೊಳ್ಳಲು ಅಮೆರಿಕಾ ಜನತೆಗೆ ದೇಶದ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಕರೆ ಕೊಟ್ಟಿದ್ದಾರೆ. 
ಶ್ವೇತ ಭವನ ತೊರೆಯುವುದಕ್ಕೂ ಮುಂಚಿತವಾಗಿ ಶುಕ್ರವಾರ ಯುವಜನತೆಯೊಂದಿಗೆ ಸಂವಾದ ನಡೆಸಿ ಕೊನೆಯ ಭಾಷಣ ಮಾಡಿರುವ ಮಿಶೆಲ್ ಒಬಾಮ, ಕಳೆದ ಎಂಟು ವರ್ಷಗಳಿಂದ ಅಮೆರಿಕಾದ ಪ್ರಥಮ ಮಹಿಳೆಯಾಗಿರುವುದು "ನನ್ನ ಜೀವನದ ಅತಿ ದೊಡ್ಡ ಗೌರವ" ಎಂದಿದ್ದಾರೆ. 
"ಈ ಕೊಠಡಿಯಲ್ಲಿರುವ ಎಲ್ಲ ಯುವಜನತೆ ಮತ್ತು ಇದನ್ನು ವೀಕ್ಷಿಸುತ್ತಿರುವವರೆಲ್ಲ, ತಿಳಿಯಬೇಕಿರುವುದೇನೆಂದರೆ ಈ ದೇಶ ನಿಮ್ಮದು - ನಿಮ್ಮೆಲ್ಲರದ್ದು, ಎಲ್ಲ ರೀತಿಯ ಹಿನ್ನಲೆಯಿಂದ ಬಂದವರದ್ದು ಜೀವನದ ವಿವಿಧ ಆಯಾಮಗಳಿಗೆ ಸೇರಿರುವವರದ್ದು" ಎಂದು ಹೇಳುವಾಗ ಮಿಶೆಲ್ ಗದ್ಗದಿತರಾದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. 
ತಮ್ಮ ಭಾಷಣದಲ್ಲಿ ಜನವರಿ ೨೦ ರಂದು ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಬಗ್ಗೆ ಒಮ್ಮೆಯೂ ಪ್ರಸ್ತಾಪಿಸದೆ ಮಿಶೆಲ್, ಚುನಾವಣಾ ವೇಳೆಯಲ್ಲಿ ಬಳಸಲಾದ ಒಡೆಯುವ, ಆಕ್ರಮಣಕಾರಿ ತಂತ್ರವನ್ನು ಖಂಡಿಸಿ 'ಭರವಸೆಯ ಅಧಿಕಾರ' ಮುಖ್ಯ ಎಂದಿದ್ದಾರೆ. 
ವಲಸಿಗರ ಬಗ್ಗೆ ಪ್ರೀತಿಯ ಮಾತುಗಳನ್ನಾಡಿರುವ ಪ್ರಥಮ ಮಹಿಳೆ, "ಅಮೆರಿಕಾದ ಸಂಪ್ರದಾಯದ ಬಗ್ಗೆ ಹೆಮ್ಮೆಯಿದೆ. ಹೊಸ ಸಂಸ್ಕೃತಿಗಳು, ಪ್ರತಿಭೆಗಳು ಮತ್ತು ಹೊಳಹುಗಳು ಪೀಳಿಗೆಯಿಂದ ಪೀಳೆಗೆಗೆ ಮಿಳಿತವಾಗಿವೆ. ಅದೇ ಭೂಮಿಯ ಮೇಲೆ ನಮ್ಮ ದೇಶವನ್ನು ಅತ್ಯದ್ಭುತ ರಾಷ್ಟ್ರವನ್ನಾಗಿ ಮಾಡಿರುವುದು" ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT