ವಿದೇಶ

ಭಾರತದ ಎನ್ಎಸ್ ಜಿ ಸದಸ್ಯಕ್ಕೆ ಚೀನಾದಿಂದ ತಡೆ: ಬರಾಕ್ ಒಬಾಮ ಆಡಳಿತದ ಕಿಡಿ

ಭಾರತದ ಪರಮಾಣು ಸರಬರಾಜು ಸಮೂಹದ (ಎನ್ ಎಸ್ ಜಿ) ಸದಸ್ಯತ್ವಕ್ಕೆ ’ಹೊರಗಿನ’ ಚೀನಾದಿಂದ ತಡೆಯುಂಟಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ಕಿಡಿ ಕಾರಿದೆ.

ವಾಷಿಂಗ್ ಟನ್: ಭಾರತದ  ಪರಮಾಣು ಸರಬರಾಜು ಸಮೂಹದ (ಎನ್ ಎಸ್ ಜಿ) ಸದಸ್ಯತ್ವಕ್ಕೆ ’ಹೊರಗಿನ’ ಚೀನಾದಿಂದ ತಡೆಯುಂಟಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತ ಕಿಡಿ ಕಾರಿದೆ. 
ಚೀನಾವನ್ನು ಹೊರಗಿನ( ಸಂಬಂಧಪಡದ) ರಾಷ್ಟ್ರ ಎಂದಿರುವ ಅಮೆರಿಕ, ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಒಂದು ಹೊರಗಿನ ರಾಷ್ಟ್ರ ತಡೆಯೊಡ್ಡುತ್ತಿದ್ದು, ಅದು ನಿಸ್ಸಂಶಯವಾಗಿ ಚೀನಾ ಆಗಿದೆ. ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಅಮೆರಿಕ ಸರ್ಕಾರದ ದಕ್ಷಿಣ ಹಾಗೂ ಕೇಂದ್ರ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿರುವ ನಿಶಾ ದೇಸಾಯಿ ಬಿಸ್ವಾಲ್ ಅಭಿಪ್ರಾಯಪ್ರಾಯಪಟ್ಟಿದ್ದಾರೆ. 
ಅಮೆರಿಕ ಎನ್ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಮತ್ತೊಮ್ಮೆ ಬೆಂಬಲ ನೀಡಿರುವುದು ಒಬಾಮ ಆಡಳಿತ ಕೊನೆಗೊಳ್ಳುವುದಕ್ಕೆ ಇನ್ನು 5 ದಿನಗಳಿದ್ದು, ಜ.20 ರಿಂದ ಟ್ರಂಪ್ ಆಡಳಿತ ಪ್ರಾರಂಭವಾಗಲಿರುವ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ. ಭಾರತ ಎನ್ಎಸ್ ಜಿ ಸದಸ್ಯತ್ವ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬರಾಕ್ ಒಬಾಮ ಸ್ಪಷ್ಟ ನಿಲುವು ಹೊಂದಿದ್ದರು. ಎನ್ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಅಮೆರಿಕ ನಿಕಟವಾಗಿ ವ್ಯವಹರಿಸಿತ್ತು. ಆದರೆ ಒಂದು ರಾಷ್ಟ್ರದಿಂದ ಎದುರಾಗಿರುವ ತಡೆಯನ್ನು ನಿವಾರಿಸಬೇಕಿದೆ ಎಂದು ನಿಶಾ ದೇಸಾಯಿ ಬಿಸ್ವಾಲ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ