ವಿದೇಶ

ಇಸ್ತಾಂಬುಲ್ ನೈಟ್'ಕ್ಲಬ್ ಉಗ್ರರ ದಾಳಿ: ಶಂಕಿತ ಉಗ್ರನ ಬಂಧನ

Manjula VN

ಇಸ್ತಾಂಬುಲ್: ಹೊಸವರ್ಷಾಚರಣೆ ದಿನದಂದು ಇಸ್ಲಾಂಬುಲ್'ನ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿ 39 ಮಂದಿಯನ್ನು ಬಲಿ ಪಡೆದುಕೊಂಡಿದ್ದ ಶಂಕಿತ ಉಗ್ರನೊಬ್ಬನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿರುವುದಾಗಿ ಮಂಗಳವಾರ ತಿಳಿದುಬಂದಿದೆ.

ಅಂತರಾಷ್ಟ್ರೀಯ ನೈಟ್ ಕ್ಲಬ್ ಹಾಗೂ ಹೈ-ಫೈ ಕ್ಲಬ್ ಎಂದೇ ಹೇಳಲಾಗುವ ಒರ್ಟ್ ಕೊಯ್ ಪ್ರದೇಶದ ರೈನಾ ನೈಟ್ ಕ್ಲಬ್ ಮೇಲೆ ಹೊಸವರ್ಷಾಚರಣೆ ದಿನದಂದು ಇಬ್ಬರು ಉಗ್ರರು ದಾಳಿ ನಡೆಸಿದ್ದರು. ಈ ವೇಳೆ 39 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದಾಳಿಯ ಹೊಣೆಯನ್ನು ಇಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

ದಾಳಿ ಬಳಿ ಉಗ್ರರು ತಲೆಮರೆಸಿಕೊಂಡಿದ್ದರು. ಉಗ್ರರಿಗಾಗಿ ಕಾರ್ಯಾಚರಣೆಗಿಳಿದಿದ್ದ ಅಧಿಕಾರಿಗಳು ಇದೀಗ ಶಂಕಿತ ಉಗ್ರನೊಬ್ಬನನ್ನು ಬಂಧನಕ್ಕೊಳಪಡಿಸಿದ್ದಾರೆಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

ಇಸ್ತಾಂಬುಲ್ ನ ಎಸೆನ್ಯುರ್ಟ್ ಜಿಲ್ಲೆಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರನ್ನು ಅಧಿಕಾರಿಗಳು ಬಂಧನಕ್ಕೊಳಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಬಂಧಿತ ಶಂಕಿತ ಉಗ್ರ ಉಜ್ಬೇಕಿಸ್ತಾನ ಮೂಲದ ಅಬ್ದುಲ್ ಕಾದಿರ್ ಮಶಿರಿಪೊವ್ ಎಂದು ಗುರ್ತಿಸಲಾಗಿದೆ. ಉಗ್ರನೊಂದಿಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಆತನನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

SCROLL FOR NEXT