ಬೈರುತ್: ಉತ್ತರ ಸಿರಿಯಾದಲ್ಲಿ ನಡೆದ ವಾಯುದಾಳಿಯಲ್ಲಿ ಅಲ್ ಖೈದಾ ಅಂಗ ಸಂಘಟನೆ ಫತೇ ಅಲ್ ಶಾಮ್ ಸಂಘಟನೆಗೆ ಸೇರಿದ 40ಕ್ಕೂ ಹೆಚ್ಚು ಉಗ್ರರ ಹತ್ಯೆಯಾಗಿದ್ದಾರೆ.
ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಈ ವಿಷಯವನ್ನು ಬಹಿರಂಗಗೊಳಿಸಿದ್ದು ಅಲೆಪ್ಪೋದಲ್ಲಿ ವಾಯುದಾಳಿ ನಡೆಸಿದವರು ಯಾರೆಂಬುದು ಕೂಡಲೇ ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಆದರೆ ಸಿರಿಯಾ ಸೇನೆ ಜತೆ ಸೇರಿ ಅಮೆರಿಕ ಮತ್ತು ರಷ್ಯಾ ಫತೇ ಅಲ್ ಶಾಮ್ ಉಗ್ರ ಸಂಘಟನೆ ವಿರುದ್ಧ ವಾಯುದಾಳಿ ನಡೆಸುತ್ತಿದೆ ಎಂದು ಹೇಳಿದೆ.