ನ್ಯೂಯಾರ್ಕ್: ಪ್ರಖ್ಯಾತ ಹಾಸ್ಯ ನಟಿ ಮೇರಿ ಟೈಲರ್ ಮೋರೆ ಬುಧವಾರ ನಿಧನರಾಗಿದ್ದಾರೆ. ಕಿರುತೆರೆ ನಟಿಯಾಗಿದ್ದ ಅವರು 60ರ ದಶಕದ ಹಲವು ಕಾರ್ಯಕ್ರಮಗಳು ಜನಪ್ರಿಯವಾಗಿದ್ದವು.
80 ವರ್ಷದ ಮೇರಿ ಟೈಲರ್ ಪತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. 1970 ರಲ್ಲಿ ಮೊದಲ ಮಹಿಳಾ ಹಾಸ್ಯ ಪ್ರಧಾನ ಕಾರ್ಯಕ್ರಮ ಆರಂಭಿಸಿದ್ದರು. ಪ್ರಸಿದ್ಧ ಎಮ್ಮಿ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು, 1980 ರಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದರು.
ಹಲವು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮೇರಿ ಟೈಲರ್ 2011 ರಲ್ಲಿ ತಲೆಯಲ್ಲಿದ್ದ ಟ್ಯೂಮರ್ ತೆಗೆಸಲು ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ದಿ ಡಿಕ್ ವ್ಯಾನ್ ಡೈಕ್ ನಲ್ಲಿ ಮೇರಿ ಟೈಲರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.