ವಿದೇಶ

ಸೂರ್ಯ ನಮಸ್ಕಾರ ಯಜ್ಞಕ್ಕೆ ಅಮೆರಿಕಾ ಕಾಂಗ್ರೆಸ್ ನಿಂದ ಮಾನ್ಯತೆ!

Srinivas Rao BV
ವಾಷಿಂಗ್ ಟನ್: ಅಮೆರಿಕಾದಲ್ಲಿ ಕಳೆದ 10 ವರ್ಷಗಳಿಂದ ನಡೆಸಲಾಗುತ್ತಿರುವ ವಾರ್ಷಿಕ ಸೂರ್ಯ ನಮಸ್ಕಾರ ಯಜ್ಞಕ್ಕೆ ಅಮೆರಿಕಾದ ಕಾಂಗ್ರೆಸ್ ನಲ್ಲಿ ಮಾನ್ಯತೆ ದೊರೆತಿದೆ. 
ಹಿಂದು ಸ್ವಯಂ ಸೇವಕ ಸಂಘದ 10 ನೇ ವರ್ಷದ ಹೆಲ್ತ್ ಫಾರ್ ಹ್ಯುಮಾನಿಟಿ ಯೋಗಥಾನ್ ಅಥವಾ ಸೂರ್ಯ ನಮಸ್ಕಾರ ಯಜ್ಞವನ್ನು ಮಾನ್ಯ ಮಾಡಬೇಕೆಂದು ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸಂಸದ ಬಿಲ್ ಫೋಸ್ಟರ್ ಮನವಿ ಮಾಡಿದರು. 
ಸರಳ ಯೋಗಾಸನಗಳು ಹಾಗೂ ಸರಳ ಉಸಿರಾಟದ ತಂತ್ರಗಳನ್ನೊಳಗೊಂಡಿರುವ ಸೂರ್ಯ ನಮಸ್ಕಾರದಿಂದ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಫೋಸ್ಟರ್ ಅಮೆರಿಕ ಕಾಂಗ್ರೆಸ್ ನಲ್ಲಿ ಹೇಳಿದ್ದಾರೆ. 
ಜ.14 ರಂದು ಸೂರ್ಯ ತನ್ನ ಪಥ ಬದಲಿಸುವ ದಿನದಂದು ವಿಶ್ವಾದ್ಯಂತ ಪ್ರತಿಯೊಬ್ಬ ಹಿಂದುವೂ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಈ ಆಚರಣೆಯ ಭಾಗವಾಗಿ ಹಿಂದು ಸ್ವಯಂ ಸೇವಕ ಸಂಘ ಪ್ರತಿ ವರ್ಷ ಜ.14 ರಿಂದ ಜ.29 ರ ವರೆಗೆ ಯೋಗಾ ಫಾರ್ ಹೆಲ್ತ್, ಹೆಲ್ತ್ ಫಾರ್ ಹ್ಯುಮಾನಿಟಿ ಯೋಗಥಾನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 16 ದಿನಗಳ ಕಾರ್ಯಕ್ರಮದಲ್ಲಿ ಯೋಗ ಮಾಡುವುದರಿಂದ ದೇಹ, ಮನಸ್ಸುಗಳ ಆರೋಗ್ಯ ಉತ್ತಮಗೊಳ್ಳುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಫೋಸ್ಟರ್ ಸಂಸತ್ ಗೆ ತಿಳಿಸಿದ್ದಾರೆ. 
SCROLL FOR NEXT