ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ 
ವಿದೇಶ

ಮುಂಬೈ ದಾಳಿ ರೂವಾರಿ ಉಗ್ರ ಹಫೀಜ್ ಸೈಯೀದ್'ಗೆ ಗೃಹ ಬಂಧನ

26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ ನನ್ನು ಪಾಕಿಸ್ತಾನದ ಲಾಹೋರ್'ನಲ್ಲಿ ಗೃಹ ಬಂಧನದಲ್ಲಿಟ್ಟಿರುವುದಾಗಿ ಮೂಲಗಳು ತಿಳಿಸಿವೆ...

ಲಾಹೋರ್: 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ ನನ್ನು ಪಾಕಿಸ್ತಾನದ ಲಾಹೋರ್'ನಲ್ಲಿ ಗೃಹ ಬಂಧನದಲ್ಲಿಟ್ಟಿರುವುದಾಗಿ ಮೂಲಗಳಿಂದ ಮಂಗಳವಾರ ತಿಳಿದುಬಂದಿದೆ.

ಹಫೀಜ್ ಸಯೀದ್ ಗೆ ಗೃಹ ಬಂಧನ ವಿಧಿಸಿರುವ ಪಾಕಿಸ್ತಾನ ಸರ್ಕಾರ ಈತನ ಉಗ್ರ ಸಂಘಟನೆಗೂ ನಿಷೇಧ ಹೇರುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನದ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ. ಹಪೀಝ್ ಸೈಯದ್ ನನ್ನು ಲಾಹೋರ್ ನಲ್ಲಿರುವ ಚೌಬುರ್ಜಿಯ ಖ್ವಾದ್ವಿಸಿಯ ಮಸೀದಿ ಬಳಿಯ ಗೃಹ ಬಂಧನದಲ್ಲಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಗೃಹ ಬಂಧನದಲ್ಲಿರುವ ಉಗ್ರ ಸಯೀದ್ 2008ರ 26/11 ಮುಂಬೈದಾಳಿಯ ಪ್ರಮುಖ ರುವಾರಿಯಾಗಿದ್ದು, ಭಾರತ-ಅಮೆರಿಕಾ ರಾಷ್ಟ್ರಗಳಿಗೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ. ಮುಂಬೈ ದಾಳಿಯಲ್ಲಿ ಹಲವಾರು ಅಮಾಯಕ ಜೀವಗಳ ಸಾವಿಗೆ ಕಾರಣನಾಗಿದ್ದ ಸಯೀದ್ ನನ್ನು ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸುವಂತೆ ಭಾರತ ಈ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದರೂ, ಪಾಕಿಸ್ತಾನ ಮಾತ್ರ ಆತನನ್ನು ರಕ್ಷಿಸುವ ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಬಂದಿತ್ತು. ಇದೀಗ ಪಾಕಿಸ್ತಾನ ಸರ್ಕಾರವೇ ಹಫೀಜ್'ಗೆ ಗೃಹಬಂಧನದಲ್ಲಿ ಇರಿಸಿರುವ ಹಿನ್ನಲೆ ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ನಡೆಯುತ್ತಿದೆ.

ಇನ್ನು ಹಫೀಜ್ ನ್ನು ಗೃಹ ಬಂಧನದಲ್ಲಿ ಇರಿಸುವುದರ ಬಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಚೌಧರಿ ನಿಸಾರ್ ಅವರು ಸ್ಪಷ್ಟಪಡಿಸಿದ್ದಾರೆ. ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಬಗ್ಗೆ 2001ರಿಂದಲೂ ಅಲ್ಲಿನ ಸರ್ಕಾರ ಮಾಹಿತಿ ಕಲೆ ಹಾಕುತ್ತಿತ್ತು. ಹಾಗೂ ಈ ಸಂಘಟನೆಯ ಮೇಲೆ ಸೂಕ್ಷ್ಮವಾಗಿ ಗಮನ ಹರಿಸುತ್ತಿತ್ತು ಎಂದು ಚೌಧರಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್