ವಿದೇಶ

ಉಗ್ರ ಹಫಿಜ್ ಸಯೀದ್ ವಿರುದ್ಧ ಎಫ್ಐಆರ್ ದಾಖಲು: ಪಾಕ್ ಸಚಿವ

Lingaraj Badiger
ಲಾಹೋರ್: ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫಿಜ್ ಸಯೀದ್ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದು ಪಾಕಿಸ್ತಾನದ ಹಿರಿಯ ಸಚಿವರೊಬ್ಬರು ಬುಧವಾರ ಹೇಳಿದ್ದಾರೆ. ಆದರೆ ಮುಂಬೈ ದಾಳಿಯ ರೂವಾರಿ ಹಫಿಜ್ ಸಯೀದ್ ವಿರುದ್ಧ ಯಾವ ಕೇಸ್ ದಾಖಲಿಸುತ್ತಾರೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಎಲ್ಲಾ ಸಂಸ್ಥೆಗಳೊಂದಿಗೆ ಚರ್ಚಿಸಿದ ನಂತರ ಸಯೀದ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದ್ದು, ಸದ್ಯ ಸರ್ಕಾರ ಆತನಿಗೆ ಗೃಹ ಬಂಧನ ವಿಧಿಸಿದೆ. ಆದರೆ ಮುಂದೆ ಸಯೀದ್ ವಿರುದ್ಧ ಎಫ್ ಐಆರ್ ದಾಖಲಿಸುವುದಾಗಿ ಒಕ್ಕೂಟ ವಾಣಿಜ್ಯ ಸಚಿವ ಕುರ್ರಂ ದಸ್ತಗಿರ್ ಅವರು ತಿಳಿಸಿದ್ದಾರೆ.
ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಯೀದ್ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತಿದೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಲವೇ ದಿನಗಳಲ್ಲಿ ಅದು ನಿಮಗೆ ತಿಳಿಯಲಿದೆ ಎಂದಷ್ಟೇ ಹೇಳಿದ್ದಾರೆ.
ಜಮಾದ್ ಉದ್ ತಾವಾ ಮತ್ತು ಫಲಹಾ ಐ ಇನ್ಸಾನ್ಯಾತ್ ಸಂಘಟನೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಎರಡು ಸಂಘಟನೆಗಳ ಮತ್ತಷ್ಟು ಕಾರ್ಯಕರ್ತರನ್ನು ಬಂಧಿಸಲಾಗುವುದು ಎಂದು ಪಂಜಾಬ್ ಪ್ರಾಂತ್ಯದ ಕಾನೂನು ಸಚಿವ ರಾಣಾ ಸನಾಉಲ್ಲಾ ಅವರು ಹೇಳಿದ್ದಾರೆ.
SCROLL FOR NEXT