ವಿದೇಶ

ಪ್ರಧಾನಿ ಮೋದಿ ಇಸ್ರೇಲ್ ಭೇಟಿ: ಸೈಬರ್ ಭದ್ರತೆಯ ಸಹಕಾರ ಮಹತ್ವದ ಕಾರ್ಯಸೂಚಿ

Srinivas Rao BV
ಜೆರುಸಲೇಮ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಇಸ್ರೇಲ್ ಸಜ್ಜುಗೊಂಡಿದ್ದು, ಪ್ರಧಾನಿ ಮೋದಿ ಭೇಟಿಗೂ ಮುನ್ನ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೈಬರ್ ಭದ್ರತೆಯ ಸಹಕಾರ ಮಹತ್ವದ ಕಾರ್ಯಸೂಚಿಗಳಲ್ಲಿ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ. 
ಈ ಹಿಂದೆ ನಾವು ಇಸ್ರೇಲ್ ನಿಂದ ಬಂದವರು ಎಂದು ಹೇಳಿಕೊಳ್ಳುವುದು ಅನಾನುಕೂಲತೆಯಾಗಿತ್ತು. ಆದರೆ ಇಂದು ಸೈಬರ್ ಭದ್ರತೆ ಅಥವಾ ಆಧುನಿಕ ತಂತ್ರಜ್ಞಾನದ ವಿಷಯ ಚರ್ಚೆಯಾದಾಗ ಇಸ್ರೇಲ್ ಕಂಪನಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ, ಇಡೀ ವಿಶ್ವಕ್ಕೇ ಇಸ್ರೇಲ್ ಬೇಕಾಗಿದ್ದು, ಇಲ್ಲಿಗೆ ಬರುತ್ತಿದೆ ಎಂದು ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವದ ಪ್ರಮುಖ ಪ್ರಧಾನಿ ಎಂದು ಹೇಳಿರುವ ನೇತನ್ಯಾಹು, ಸೈಬರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಇಸ್ರೇಲ್ ನೊಂದಿಗೆ ನಿಕಟ ಸಹಕಾರ ಬಯಸುತ್ತಿದೆ ಎಂದು ಹೇಳಿದ್ದಾರೆ. 
SCROLL FOR NEXT