ಮೋದಿ ನೀಡಿದ ಪ್ರತಿಕೃತಿಗಳ ಉಡುಗೊರೆ
ಇಸ್ರೇಲ್: ನರೇಂದ್ರ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರಿಗೆ ಭಾರತದಲ್ಲಿ ಯಹೂದಿಗಳ ಸುದೀರ್ಘ ಇತಿಹಾಸ ತಿಳಿಸುವ ಕೇರಳದ ಎರಡು ಕಲಾಕೃತಿಗಳ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೇರಳದಲ್ಲಿ 9-10ನೇ ಶತಮಾನದಲ್ಲಿ ಕೆತ್ತಲಾಗಿದೆ ಎಂದು ಹೇಳಲಾಗಿರುವ ತಾಮ್ರದ ತಟ್ಟೆಯ ಮೇಲಿರುವ ಅವಶೇಷಗಳ ಪ್ರತಿಕೃತಿ ಇದು ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಟ್ವೀಟ್ ಮಾಡಿದೆ.
ಮೊದಲ ಪ್ರತಿಕೃತಿಯಲ್ಲಿ ಕೊಚಿನ್ ಭಾರತದಲ್ಲಿ ಕೊಚಿನ್ ಯಹೂದಿಗಳ ಬಗ್ಗೆ ಮಾಹಿತಿಯಿದೆ. ಹಿಂದೂ ರಾಜ ಚೆರಮನ್ ಪೆರುಮಾಳ್ ಅಥವಾ ಭಾಸ್ಕರ ರವಿ ವರ್ಮಾ ಯಹೂದಿಗಳ ಮುಖಂಡ ಜೊಸೆಫ್ ರಬ್ಬನ್ ಗೆ ನೀಡಿರುವ ಗೌರವಾದರ, ವಿಶೇಷ ಸವಲತ್ತುಗಳನ್ನು ವಿವರಿಸುತ್ತದೆ.
ಸಂಪ್ರದಾಯವಾದಿ ಯಹೂದಿಗಳ ಪ್ರಕಾರ ಜೊಸಪ್ ರಬ್ಬಾನ್ ಕ್ರಾಂಗನೂರ್ ನ ಶಿಂಘ್ಲಿಯ ರಾಜನಾಗಿದ್ದ ಎಂದು ಹೇಳಲಾಗುತ್ತದೆ. ಯಹೂದಿಗಳು ಕೊಚಿನ್ ಮತ್ತು ಮಲಬಾರ್ ಪ್ರದೇಶಗಳಿಗೆ ತೆರಳುವ ಮೊದಲು, ಕ್ರಾಂಗಾನೂರ್ ನಲ್ಲಿದ್ದರು, ಅಲ್ಲಿ ಯಹೂದಿಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಅನುಭವಿಸುತ್ತಿದ್ದರು ಎಂದು ಹೇಳಲಾಗಿದೆ. ಕ್ರಾಂಗಾನೂರ್ ಅಥವಾ ಶಿಂಘ್ಲಿಯನ್ನು ಪ್ರವಿತ್ರವಾದ ಎರಡನೇ ಜೆರುಸೇಲಂ ಎಂದು ಕರೆಯಲಾಗುತ್ತಿತ್ತು.
ಕೊಚ್ಚಿಯ ಮ್ಯಾಟ್ಟೆಂಚರಿಯಲ್ಲಿರುವ ಪರದೇಸಿ ಸಿನಾಗೋಗ್ ಸಹಕಾರದಿಂದ ಈ ಪ್ರತಿಕೃತಿಗಳ ತಯಾರಿಕೆ ಸಾಧ್ಯವಾಯಿತು.
ಇನ್ನೂ ಎರಡನೇ ಅವಶೇಷದಲ್ಲಿರುವ ಪ್ರತಿಕೃತಿಯಲ್ಲಿ ಯಹೂದಿಗಳು ಭಾರತದಲ್ಲಿ ನಡೆಸಿದ ಆರಂಭಿಕ ವ್ಯಾಪಾರಗಳ ಬಗ್ಗೆ ಮಾಹಿತಿ ನೀಡುತ್ತದೆ. ಸ್ಥಳೀಯ ಹಿಂದೂ ರಾಜ ನೀಡಿದ ಭೂ ದಾನ ಹಾಗೂ ತೆರಿಗೆಗಳ ಬಗ್ಗೆ ಇದರಲ್ಲಿ ಉಲ್ಲೇಖವಿದೆ.
ಪಶ್ಚಿಮ ಏಷ್ಯಾ ಮತ್ತು ಭಾರತೀಯ ವ್ಯಾಪಾರಿ ಸಂಘಗಳ ಬಗ್ಗೆ ಮಾಹಿತಿಯಿದ್ದು, ಸ್ಥಳೀಯ ಕೆಲಸಗಾರರು ಅರಿವಿಲ್ಲದೆ ಈ ಪ್ರತಿಕೃತಿಗಳಲ್ಲಿದ್ದ ಸಹಿಯನ್ನು ಕತ್ತರಿಸಿದ್ದಾರೆ ಎಂದು ಪಿಎಂಓ ಟ್ವೀಟ್ ಮಾಡಿದೆ.
ಕೇರಳದ ತಿರುವಲ್ಲಾ ದಲ್ಲಿರುವ ಮಲಂಕಾರ ಮಾರ್ ಥೋಮಾ ಸಿರಿಯನ್ ಚರ್ಚ್ ನ ಸಹಕಾರದಿಂದಾಗಿ ಈ ಪ್ರತಿಕೃತಿಗಳ ನಿರ್ಮಾಣ ಸಾಧ್ಯವಾಗಿದೆ.