ವಿದೇಶ

ಹೈಫಾಗೆ ಪ್ರಧಾನಿ ಮೋದಿ ಭೇಟಿ: ಮೊದಲ ವಿಶ್ವಯುದ್ಧದ ಭಾರತೀಯ ಹುತಾತ್ಮ ಯೋಧರಿಗೆ ನಮನ

Lingaraj Badiger
ಹೈಫಾ(ಇಸ್ರೇಲ್): ಇಸ್ರೇಲ್ ಪ್ರವಾಸದ ಮೂರನೇ ದಿನವಾದ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೈಫಾಗೆ ಭೇಟಿ ನೀಡಿ ಮೊದಲನೇ ವಿಶ್ವ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು.
ಮೊದಲನೇ ವಿಶ್ವಯುದ್ಧದಲ್ಲಿ ಸುಮಾರು 44 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.  ಹೈಫಾ ಇಸ್ರೇಲ್ ನ ಉತ್ತರಭಾಗದಲ್ಲಿರುವ ಬಂದರು ನಗರಿಯಾಗಿದೆ. ಹೈಫಾದಲ್ಲಿ ಭಾರತೀಯ ಹುತಾತ್ಮ ಯೋಧರ ಸ್ಮಾರಕ ನಿರ್ಮಿಸಲಾಗಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಥ್ ನೀಡಿದ್ದರು. ಪ್ರಥಮ ವಿಶ್ವಯುದ್ಧದ ಹೀರೋ ದಲ್ಪತ್ ಸಿಂಗ್ ಅವರ ವೀರಗಾಥೆಯ ಬರಹವನ್ನೊಳಗೊಂಡ ವಿವರವನ್ನು ಉಭಯ ನಾಯಕರು ಈ ಸಂದರ್ಭದಲ್ಲಿ ಅನಾವರಣಗೊಳಿಸಿದರು. 
1918ರ ವಿಶ್ವ ಯುದ್ಧದಲ್ಲಿ ಬಂದರು ನಗರಿ ಹೈಫಾವನ್ನು ಸ್ವತಂತ್ರಗೊಳಿಸುವ ಹೋರಾಟದಲ್ಲಿ ಹುತಾತ್ಮರಾದ 44 ಭಾರತೀಯ ಸೈನಿಕರಿಗೆ ಇದು ಅಂತಿಮ ವಿಶ್ರಾಂತಿಯ ತಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
SCROLL FOR NEXT