ನವದೆಹಲಿ: ಜರ್ಮನಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಬ್ರಿಕ್ಸ್ ನಾಯಕರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ನಿಗ್ರಹ ಹಾಗೂ ಜಾಗತಿಕ ಅರ್ಥವ್ಯವಸ್ಥೆ ಬಗ್ಗೆ ಬ್ರಿಕ್ಸ್ ನಾಯಕತ್ವವನ್ನು ಪ್ರದರ್ಶಿಸಬೇಕಿದೆ ಎಂದು ಕರೆ ನೀಡಿದ್ದಾರೆ.
ಜಿ-20 ರಾಷ್ಟ್ರಗಳು ಒಗ್ಗೂಡಿ ಭಯೋತ್ಪಾದನೆ, ಉಗ್ರವಾದಕ್ಕೆ ಸಿಗುತ್ತಿರುವ ಆರ್ಥಿಕ ನೆರವುಗಳನ್ನು ವಿರೋಧಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ. ಭಾರತದಲ್ಲಿ ಇತ್ತೀಚೆಗಷ್ಟೇ ಜಿಎಸ್ ಟಿ ಜಾರಿಯಾಗಿರುವುದರ ಬಗ್ಗೆಯೂ ಪ್ರಸ್ತಾಪಿಸಿರುವ ಮೋದಿ, ಭಾರತದಲ್ಲಿ ಜಾರಿಯಾಗಿರುವ ಜಿಎಸ್ ಯಿಂದ ಉದ್ಯಮಕ್ಕೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.
ಬ್ರಿಕ್ಸ್ ಸಮ್ಮೆಳನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಹ ಭಾಗಿಯಾಗಿದ್ದು, ಭಯೋತ್ಪಾದನೆ ಕುರಿತ ನಿಲುವಿಗೆ ಚೀನಾ-ಭಾರತ ರಾಷ್ಟ್ರಗಳ ನಾಯಕರು ಪರಸ್ಪರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.