ಪ್ಯಾರಿಸ್ ನ ಐಫೆಲ್ ಟವರ್ ನ ಜೂಲ್ಸ್ ವೆರ್ನ್ ರೆಸ್ಟೊರೆಂಟ್ ನಲ್ಲಿ ಕಳೆದ ರಾತ್ರಿ ಖಾಸಗಿ ಭೋಜನ ಸಂದರ್ಭದಲ್ಲಿ ಕ್ಯಾಮರಾಗಳಿಗೆ ಫೋಸ್ ನೀಡಿದ ಫ್ರಾನ್ಸ್ ಮೊದಲ ಮಹಿಳೆ ಬ್ರಿಗೆಟ್ಟೆ ಮ್ಯ 
ವಿದೇಶ

ನಿಮ್ಮ ಶರೀರದ ಆಕಾರ ಚೆನ್ನಾಗಿದೆ, ನೋಡಲು ಸುಂದರವಾಗಿದ್ದೀರಿ: ಫ್ರಾನ್ಸ್ ಮೊದಲ ಮಹಿಳೆಗೆ ಟ್ರಂಪ್ ಅಭಿನಂದನೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿವಾದ ಹೊಸದೇನಲ್ಲ. ಅನೇಕ ಬಾರಿ ಅವರು ಮಾಧ್ಯಮದವರ,ಸಾರ್ವಜನಿಕರ...

ಪ್ಯಾರಿಸ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿವಾದ ಹೊಸದೇನಲ್ಲ. ಅನೇಕ ಬಾರಿ ಅವರು ಮಾಧ್ಯಮದವರ,ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಾರಿ ಅವರು ಫ್ರಾನ್ಸ್ ನ ಮೊದಲ ಮಹಿಳೆ ಬಗ್ಗೆ ನೀಡಿರುವ ಅಭಿನಂದನೆ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. 
''ನಿಮ್ಮ ಶರೀರದ ಆಕಾರ ಉತ್ತಮವಾಗಿದೆ, ನೀವು ನೋಡಲು ಸುಂದರವಾಗಿದ್ದೀರಿ'' ಎಂದು ನಿನ್ನೆ ಫ್ರಾನ್ಸ್ ಅಧ್ಯಕ್ಷರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರೋನ್ ಅವರನ್ನು ನೇರವಾಗಿ ಹೊಗಳಿಬಿಟ್ಟರು. ಅಮೆರಿಕ ಅಧ್ಯಕ್ಷರ ಈ ಅಭಿನಂದನೆ ಸೆಕ್ಸಿಯಾಗಿತ್ತು ಎಂದು ಹಲವರು ಟೀಕಿಸಿದ್ದಾರೆ.
ನಿನ್ನೆ ಅಮೆರಿಕಾ ಅಧ್ಯಕ್ಷರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಿದ್ದರು.
ನಿನ್ನೆ ಪ್ಯಾರಿಸ್ ನಲ್ಲಿ ವಿಮಾನದಲ್ಲಿ ಬಂದಿಳಿದ ಟ್ರಂಪ್ ದಂಪತಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ದಂಪತಿ ಅದ್ದೂರಿ ಸ್ವಾಗತ ಕೋರಿದರು. ವಿದೇಶದಲ್ಲಿರುವಂತೆ ಎರಡೂ ಬದಿಯ ಕೆನ್ನೆಗಳಿಗೆ ಮುತ್ತು ಕೊಡುವ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರುವ ಮುನ್ನ  ಕೈ ಕುಲುಕಿ ಇಬ್ಬರೂ ನಾಯಕರು ಮತ್ತು ಅವರ ಪತ್ನಿಯರು ಸ್ವಾಗತಿಸಿಕೊಂಡರು.ನಂತರ ಡೊನಾಲ್ಡ್ ಟ್ರಂಪ್ ಬ್ರಿಗೆಟ್ಟೆ ಮ್ಯಾಕ್ರೋನ್ ರತ್ತ ಮತ್ತೆ ಕೈ ಚಾಚಿ, ನೀವು ಸುಂದರವಾಗಿದ್ದೀರಿ, ನಿಮ್ಮ ಶರೀರದ ಆಕಾರ ಸುಂದರವಾಗಿದೆ ಎಂದು ಹೇಳಿದರು. ಇದು ನಾಲ್ಕೂ ದಿಕ್ಕುಗಳಿಂದ ಅವರನ್ನು ಸುತ್ತುವರಿದಿದ್ದ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಫ್ರಾನ್ಸ್ ಅಧ್ಯಕ್ಷರ ಪತ್ನಿಗೆ ಸಹ ಒಂದು ಕ್ಷಣ ಏನು ಹೇಳಬೇಕೆಂದು ತೋಚಲಿಲ್ಲವಂತೆ.
ಅಮೆರಿಕಾ ಅಧ್ಯಕ್ಷರ ಈ ಹೇಳಿಕೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ಸುರಿಮಳೆಯೇ ಹರಿದಿದೆ. ಟ್ರಂಪ್ ಅವರ ಕಮೆಂಟ್ ಲೈಂಗಿಕ ಆಕರ್ಷಣೆಯ ರೀತಿ ಇತ್ತು ಎಂದು ಜನರು ಪ್ರತಿಕ್ರಿಯಿಸಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.
ಫ್ರಾನ್ಸ್ ನ ಮೊದಲ ಮಹಿಳೆ ಹತ್ತಿರ ಡೊನಾಲ್ಡ್ ಟ್ರಂಪ್ ಮಾತನಾಡಿದ ರೀತಿ ಅಭಿನಂದನೆ ಮತ್ತು ಲೈಂಗಿಕ ಕಿರುಕುಳದ ನಡುವಿನ ಗೆರೆಯಲ್ಲಿ ಪುರುಷರ ಮನೋಧರ್ಮವನ್ನು ಸೂಚಿಸುತ್ತದೆ ಎಂದು ಮಹಿಳಾವಾದಿ ಮತ್ತು ಲಿಂಗ ವಿಷಯಗಳ ಕುರಿತು ಕೆಲಸ ಮಾಡುವ ವಿಡಿಯೊ ನಿರ್ಮಾಪಕಿ ಮತ್ತು ಬರಹಗಾರ್ತಿ ಅಲೆಕ್ಸ್ ಬರ್ಗ್ ಎಂಬವವರು ಹೇಳಿದ್ದಾರೆ.
ಮತ್ತೊಬ್ಬ ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ನಟಿ ಜೆನ್ ಸೈಬೆಲ್ ನ್ಯೂಸ್, ಮಿ.ಟ್ರಂಪ್ ಅವರೇ, ಮಹಿಳೆಯರು ತಮ್ಮ ದೇಹಗಳ ಬಗ್ಗೆ ನೀವು ಏನು ಯೋಚಿಸುತ್ತೀರಿ ಎಂದು ಅನಪೇಕ್ಷಿತ ಮಾತುಗಳನ್ನು ಕೇಳಲು ಬಯಸುವುದಿಲ್ಲ. ಎಲ್ಲಾ ದೃಷ್ಟಿಯಿಂದಲೂ ನಿಮ್ಮ  ಈ ಮಾತು ಖಂಡಿತವಾಗಿಯೂ ಸರಿಯಲ್ಲ' ಎಂದು ಹೇಳಿದ್ದಾರೆ.
ನಂತರ ನಿನ್ನೆ ರಾತ್ರಿ ಫ್ರಾನ್ಸ್ ಅಧ್ಯಕ್ಷ 39 ವರ್ಷದ ಎಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಅವರ ಪತ್ನಿ 64 ವರ್ಷದ ಬ್ರಿಗಿಟ್ಟೆ ಮ್ಯಾಕ್ರೋನ್ ಜೊತೆಗೆ ಗೌರ್ಮೆಟ್ ಐಫೆಲ್ ಟವರ್ ರೆಸ್ಟೊರೆಂಟ್ ನಲ್ಲಿ ರಾತ್ರಿ ಭೋಜನ ಸೇವಿಸಿದ್ದರು.
ಟ್ರಂಪ್ ಅವರ ಈ ಹೇಳಿಕೆ ಬಗ್ಗೆ ಅಮೆರಿಕಾದ ಶ್ವೇತಭವನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT