ಬ್ರೆಜಿಲ್: ದೇವರ ಕೃಪೆಯಿಂದ ಕೆಲವೊಮ್ಮೆ ಜೀವನದಲ್ಲಿ ಪವಾಡಗಳು ನಡೆಯುತ್ತವೆ. ಮಿದುಳು ನಿಷ್ಕ್ರಿಯಗೊಂಡ 21 ವರ್ಷದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಕುತ್ತಿಗೆ ಮತ್ತು ತಲೆ ನೋವಿನಿಂದ ಬಳಲುತ್ತಿದ್ದ ಬ್ರೆಜಿಲ್ ನ ಫ್ರಾಂಕ್ಲಿನ್ ಡಾ ಸಿಲ್ವಾ ಜಂಪೊಳಿ ಪದೀಲಾ ಎಂಬ ಮಹಿಳೆಗೆ ಮಿದುಳಿನಲ್ಲಿ ರಕ್ತ ಸ್ರಾವವಾಗುತ್ತಿತ್ತು, ನಂತರ ಮಿದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇ ಆಕೆಯ ಪತಿ ಮುರಿಯಲ್ ಪಧೀಲಾ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ. ಈ ವೇಳೆಗೆ ಆಕೆ 9 ವಾರಗಳ ಗರ್ಭಿಣಿಯಾಗಿದ್ದಳು.
ಇದನ್ನು ಒಪ್ಪಿಕೊಳ್ಳಲು ಸಿದ್ಧವಾಗಿ, ನಾನು ವಾಪಸ್ ಮನೆಗೆ ಬರಲಾರೆ, ಇದೆ ಆಕೆಯ ಕೊನೆಯ ಮಾತಾಗಿತ್ತು. ಆಸ್ಪತ್ರೆಗೆ ಬಂದ ಆಕೆಗೆ ವೈದ್ಯರು ಕೂಡಲೇ ವೆಂಟಿಲೇಟರ್ ಅಳವಡಿಸಿದರು. ಆಕೆಯ ಗರ್ಭದಲ್ಲಿದ್ದ ಅವಳಿ ಮಕ್ಕಳು ಬದುಕುವ ಸಾಧ್ಯತೆ ಬಗ್ಗೆ ವೈದ್ಯರು ಯಾವುದೇ ಭರವಸೆ ನೀಡಲಿಲ್ಲ.
ಒಮ್ಮೆ ಆಕೆಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ವೈದ್ಯರು ಪರೀಕ್ಷಿಸಿದರು. ಈ ವೇಳೆ ಗರ್ಭದಲ್ಲಿದ್ದ ಶಿಶುಗಳ ಹೃದಯ ಬಡಿತ ಕ್ಷೀಣಗೊಂಡಿತ್ತು. ಮತ್ತೆ ವೆಂಟಿಲೇಟರ್ ಅಳವಡಿಸಿದಾಗ ಮಕ್ಕಳ ಹೃದಯ ಬಡಿತ ಸಹಜ ಸ್ಥಿತಿಗೆ ಬಂದಿತ್ತು. ಇದನ್ನು ಗಮನಿಸಿದ ವೈದ್ಯರು, ಮಕ್ಕಳು ಭೂಮಿಗೆ ಬರುವವರೆಗೂ ಆಕೆಗೆ ವೆಂಟಿಲೇಟರ್ ಮುಂದುವರಿಸಲು ನಿರ್ಧರಿಸಿದರು. ಆಕೆಗೆ ಹೆಚ್ಚಿನ ಸಾಮರ್ಥ್ಯವುಳ್ಳ ಜೀವ ನಿರೋಧಕ ಔಷಧಿಗಳನ್ನು ನೀಡಿದರು, ಹಾಗೆಯೇ ಮಕ್ಕಳು ಕೂಡ ಉತ್ತಮವಾಗಿ ಬೆಳೆದವು.
ಇದನ್ನು ನಿಧಾನವಾಗಿ ಗಮನಿಸಿದ ವೈದ್ಯರು ತಾಳ್ಮೆಯಿಂದ ಆಕೆಯ ಗರ್ಭದಲ್ಲಿದ್ದ ಮಕ್ಕಳ ಜೊತೆ ಪ್ರತಿದಿನ ಮಾತನಾಡಿ ಮಕ್ಕಳಿಗೆ ತಾಯಿ ಪ್ರೀತಿ ತೋರಿದರು.
123 ದಿನಗಳ ನಂತರ ಅಂದರೆ 7 ನೇ ತಿಂಗಳಲ್ಲಿ ಅವಳಿ ಮಕ್ಕಳಿಗೆ ಫ್ರಾಂಕ್ಲಿನ್ ಜನ್ಮವಿತ್ತಳು. ವೈದರ ಪವಾಡದಿಂದ ಅವಳಿ ಮಕ್ಕಳು ಬದುಕುಳಿದವು.
ನವಜಾತ ಶಿಶುಗಳಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ, ದೇಹದಲ್ಲಿ ಶಕ್ತಿ ವೃದ್ಧಿಯಾಗಿ, ದೇಹ ತೂಕ ಸಹಜ ಸ್ಥಿತಿಗೆ ಬರುವವರೆಗೂ ಮಕ್ಕಳನ್ನು ಮೂರು ತಿಂಗಳ ಕಾಲ ಇನ್ ಕ್ಯುಬೇಟರ್ ನಲ್ಲಿ ಇಡಲಾಗಿತ್ತು.
ವೈದ್ಯ ಲೋಕಕ್ಕೆ ಇದೊಂದು ವಿಶೇಷ ಪ್ರಕರಣವಾಗಿತ್ತು, ಕುಸಿದು ಹೋಗುತ್ತಿದ್ದ ತಾಯಿಯ ದೇಹಕ್ಕೆ ಔಷಧಿಗಳ ಮೂಲಕ ಶಕ್ತಿ ನೀಡಿ ಮಕ್ಕಳನ್ನು ಹೊರ ಜಗತ್ತಿಗೆ ಕರೆ ತರಲಾಗಿದೆ.
ಕೇವಲ ಕುಟುಂಬದ ಸದಸ್ಯರಿಗಷ್ಟೇ ಮಾತ್ರವಲ್ಲದೇ ಆಸ್ಪತ್ರೆ ಸಿಬ್ಬಂದಿಯೆಲ್ಲಾ ಈ ಭಾವನಾತ್ಮಕ ಸನ್ನಿವೇಶಕ್ಕೆ ಕಾರಣರಾದರು.
ಫೆಬ್ರವರಿಯಲ್ಲಿ ಫ್ರಾಂಕ್ಲಿನ್ ಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆಯಲಾಯಿತು. ಆಕೆಯ ಹೃದಯ ಮತ್ತು ಕಿಡ್ನಿಯಿಂದ ಇಬ್ಬರಿಗೆ ಜೀವದಾನ ಮಾಡಲಾಯಿತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos