ವಿದೇಶ

ಕದ್ದು ಹೋದ ಸೈಕಲ್ ಅನ್ನು ಕದ್ದು ಹಿಂಪಡೆದುಕೊಂಡ ಲಂಡನ್ ಮಹಿಳೆ: ನೆರವಾಯ್ತು ಫೇಸ್ ಬುಕ್ !

Sumana Upadhyaya
ಲಂಡನ್: ವಿಲಕ್ಷಣ ಘಟನೆಯೊಂದರಲ್ಲಿ ಲಂಡನ್ ನ ಮಹಿಳೆಯೊಬ್ಬರು ತನ್ನ ಕದ್ದುಹೋದ ಸೈಕಲ್ ನ್ನು ಫೇಸ್ ಬುಕ್ ಸಹಾಯದಿಂದ ವಾಪಸ್ ಪಡೆದ ಘಟನೆ ನಡೆದಿದೆ.
ಟೆಲಿಗ್ರಾಫ್ ನಲ್ಲಿ ಮೊನ್ನೆ ಶನಿವಾರ ಪ್ರಕಟಗೊಂಡ ವರದಿಯಂತೆ ಇಂಗ್ಲೆಂಡಿನ ಬ್ರಿಸ್ಟೊಲ್ ನ ಸೈಕ್ಲಿಸ್ಟ್ ಜೆನ್ನಿ ಮಾರ್ಟನ್-ಹಂಫ್ರೈಸ್, ಕಳವಾದ ತನ್ನ ಸೈಕಲ್ ನ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿ ಇದನ್ನು ಪತ್ತೆ ಹಚ್ಚಲು ಯಾರಾದರೂ ಸಹಕರಿಸುವಂತೆ ನೆರವು ಕೋರಿದ್ದರು.
ಕಾಕತಾಳೀಯವೆಂಬಂತೆ ಅವರ ಸಹ ಸೈಕ್ಲಿಸ್ಟ್ ಫೇಸ್ ಬುಕ್ ಪುಟವನ್ನು ಹುಡುಕುತ್ತಿದ್ದಾಗ ಅದೇ ಸೈಕಲ್ ನ ಫೋಟೋ ಕಂಡುಬಂತು. ಅದರಲ್ಲಿ ಸೈಕಲ್ ಮಾರಾಟಕ್ಕಿದೆ ಎಂದು ವೆಬ್ ಸೈಟ್ ನಲ್ಲಿ ಜಾಹೀರಾತು ನೀಡಲಾಗಿತ್ತು. 
ಆಗ ಜೆನ್ನಿ ಮಾರ್ಟನ್ ಮತ್ತು ಅವರ ಸಹ ಸೈಕ್ಲಿಸ್ಟ್ ಉಪಾಯ ಹೂಡಿ ಮಾರಾಟಗಾರರಂತೆ ಹೋಗಿ ಸೈಕಲ್ ಪಡೆಯಲು ಉಪಾಯ ಹೂಡಿದರು.
ಅದಕ್ಕೆ ಪೊಲೀಸರ ಸಹಾಯವನ್ನು ಕೋರಿದರು. ತಾವು ಕೊಳ್ಳುವವರಂತೆ ಹೋದಾಗ ಕಳ್ಳರನ್ನು ಹಿಡಿಯುವಂತೆ ಕೋರಿದರು. ಆದರೆ ಪೊಲೀಸರು ಸಹಾಯ ಮಾಡಲು ನಿರಾಕರಿಸಿದರು.
ಆಗ ಮೊರ್ಟನ್ ಮತ್ತು ಅವರ ಜೊತೆಗಾರ್ಚಿ ತಾವಾಗಿಯೇ ಮಾರಾಟಗಾರರನ್ನು ಸಂಪರ್ಕಿಸಿದರು. ನನಗೆ ಈ ಸೈಕಲ್ ಖರೀದಿಸಲು ಇಷ್ಟವಿದೆ ಎಂದು ಮಾರಾಟಗಾರರಿಗೆ ಹೇಳಿ ಅವರಲ್ಲಿ ಸೈಕಲ್ ನ ಸೀಟು ಸ್ವಲ್ಪ ಎತ್ತರವಾಗಿದೆ. ಟೆಸ್ಟ್ ಡ್ರೈವ್ ಮಾಡಬಹುದೇ ಎಂದು ಕೇಳಿದರು. 
ಅದಕ್ಕೆ ಅಂಗಡಿಯವನು ಒಪ್ಪಿಕೊಂಡನು. ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಮೊರ್ಟನ್ ಮತ್ತವರ ಸಹವರ್ತಿ ಸೈಕಲ್ ನ್ನು ಎತ್ತಿಕೊಂಡು ಬಂದರು.
SCROLL FOR NEXT