ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಇಡೀ ಅಮೆರಿಕವನ್ನು ಐಸಿಬಿಎಂ ಕ್ಷಿಪಣಿ ಉಡೀಸ್ ಮಾಡಬಲ್ಲದು: ಕಿಮ್ ಜಾಂಗ್ ಉನ್

ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ(ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ...

ಕಿಮ್ ಜಾಂಗ್ ಉನ್
Vishwanath S
Updated On : 29 Jul 2017, 4:48 am
ಪಯೊಂಗ್ ಯಾಂಗ್: ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ(ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು ಈ ಕ್ಷಿಪಣಿ ಇಡೀ ಅಮೆರಿಕವನ್ನು ಧ್ವಂಸ ಮಾಡಬಲ್ಲದು ಎಂದು ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ. 
ಉತ್ತರ ಕೊರಿಯದ ಐಸಿಬಿಎಂ ಅಸ್ತ್ರವು ಹೆಚ್ಚು ಸಾಮರ್ಥ್ಯ ಹೊಂದಿದ್ದು ಇದು ಚಿಕಾಗೋ ಮತ್ತು ಲಾಸ್ ಏಂಜಲಿಸ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳನ್ನು ಒಂದೇ ಬಾರಿಗೆ ನುಚ್ಚುನೂರು ಮಾಡಬಲ್ಲದು ಎಂ ಕಿಮ್ ಜಾಂಗ್ ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ್ದಾನೆ. 
ಐಸಿಬಿಎಂ ಕ್ಷಿಪಣಿಯ ಪ್ರಯೋಗದಿಂದ ನಮಗೆ ದೊಡ್ಡ ಸಮಾಧಾನವಾಗಿದೆ. ಈ ಕ್ಷಿಪಣಿ 3,725 ಕಿ.ಮೀ ಗರಿಷ್ಠ ಎತ್ತರ ಹಾಗೂ 998 ಕಿ.ಮೀ ನಿಖರ ಗುರಿಯತ್ತ ಚಲಿಸಿ ಜಪಾನಿನ ಸಮುದ್ರ ತೀರದಲ್ಲಿ ಇಳಿದಿದೆ. 

Advertisement

Advertisement

ಅಮೆರಿಕ ಮತ್ತು ವಿಶ್ವಸಂಸ್ಥೆಯ ತೀವ್ರ ಆಕ್ಷೇಪವಿದ್ದರೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ಮತ್ತೆ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವುದು ಅಮೆರಿಕ ಅಧ್ಯಕ್ಷ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ. 
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್ ಈ ಕ್ಷಿಪಣಿ ಪ್ರಯೋಗ ಮಾಡುವ ಮೂಲಕ ಉತ್ತರ ಕೊರಿಯಾ ಅತ್ಯಂತ ಅಪಾಯಕಾರಿ ಕೃತ್ಯವೆಸಗಿದೆ. ಈ ದುಸ್ಸಾಹಸದಿಂದ ಉತ್ತರ ಕೊರಿಯಾ ಅಂತಾರಾಷ್ಟ್ರೀಯ ಸಮುದಾಯದಿಂದ ಮತ್ತಷ್ಟು ದೂರವಾಗಲಿದೆ. ಪಯೊಂಗ್ ಯಾಂಗ್ ನ ಈ ಪ್ರಚೋದನಕಾರಿ ಕೃತ್ಯಕ್ಕೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments