ಇಸ್ಲಾಮಾಬಾದ್: ಪಾಕಿಸ್ತಾನದ ಮಧ್ಯಂತರ ಪ್ರಧಾನಿ ಚುನಾವಣೆಗೆ ಆ.1 ರಂದು ಚುನಾವಣೆ ನಡೆಯಲಿದ್ದು, 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಪಾಕಿಸ್ತಾನದ ಸಂಸತ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭ್ರಷ್ಟಾಚಾರದ ಆರೋಪ ಮೇಲ್ನೋಟನ್ನೆ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಸುಪ್ರೀಂ ಕೋರ್ಟ್ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಸಾಂವಿಧಾನಿಕ ಹುದ್ದೆಯಿಂದ ಅನರ್ಹಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮಧ್ಯಂತರ ಪ್ರಧಾನಿಯ ನೇಮಕವಾಗಬೇಕಿದ್ದು, ಜು.31 ರಂದು 6 ಜನ ಅಭ್ಯರ್ಥಿಗಳು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಪಕ್ಷ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನಿಂದ ಶಾಹಿದ್ ಅಬ್ಬಾಸಿ ನಾಮಪತ್ರ ಸಲ್ಲಿಸಿದ್ದಾರೆ. ಇವರೊಂದಿಗೆ ಸಂಸತ್ ನಲ್ಲಿ ವಿಪಕ್ಷ ನಾಯಕರಾಗಿರುವ ಸಯೀದ್ ಖುರ್ಷಿದ್ ಷಾ ಸೇರಿದಂತೆ 5 ಸಂಸದರು ನಾಮಪತ್ರ ಸಲ್ಲಿಸಿದ್ದಾರೆ.