ಲಂಡನ್: ಲಂಡನ್ ಬ್ರಿಡ್ಜ್ ನಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕ ಪಾಕಿಸ್ತಾನದ ಮೂಲದವನೆಂದು ತಿಳಿದುಬಂದಿದ್ದು, ಹಿಂದೊಮ್ಮೆ ಅಲ್ಲಾಹ್ ನ ಹೆಸರಿನಲ್ಲಿ ತನ್ನ ತಾಯಿಯನ್ನೇ ಹತ್ಯೆ ಮಾಡುವುದಾಗಿ ಹೇಳಿದ್ದ ಎಂಬ ಅಘಾತಕಾರಿ ಅಂಶ ಬಹಿರಂಗವಾಗಿದೆ.
ಭಯೋತ್ಪಾದಕರ ದಾಳಿಯಲ್ಲಿ 7 ಜನರು ಮೃತಪಟ್ಟಿದ್ದರೆ 48 ಜನರು ಗಾಯಗೊಂಡಿದ್ದರು. ಮೆಟ್ರೋ ಪಾಲಿಟನ್ ಪೊಲೀಸರು ದಾಳಿ ನಡೆಸಿದ ಉಗ್ರನ ಬಗ್ಗೆ ಮಾಹಿತಿ ನೀಡಿದ್ದು, ಉಗ್ರ ಅಬ್ಜ್ ಪಾಕಿಸ್ತಾನದ ಮೂಲದ ಜಿಹಾದಿಯಾಗಿದ್ದು, ದಿ ಸನ್ ಮಾಧ್ಯಮದ ವರದಿ ಪ್ರಕಾರ 27 ವರ್ಷದ ಉಗ್ರ ಯುವಕರನ್ನು ಜಿಹಾದ್ ಗೆ ಹೆಚ್ಚು ಪ್ರೇರೇಪಿಸುತ್ತಿದ್ದ ಎಂದು ತಿಳಿದುಬಂದಿದೆ.
ಉಗ್ರ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುವುದಷ್ಟೇ ಅಲ್ಲದೇ ತಾಯಿಯನ್ನೇ ಹತ್ಯೆ ಮಾಡುವುದಕ್ಕೂ ಸಿದ್ಧನಿರುವುದಾಗಿ ಹೇಳಿದ್ದ ಎಂಬ ಅಘಾತಕಾರಿ ಅಂಶವೂ ಬಹಿರಂಗವಾಗಿದೆ.