ಭಯೋತ್ಪಾದಕರಂತೆ ಕಾಣುವ ಕಪ್ಪು ಹಿಜಾಬ್ ನ್ನು ತೆಗೆಯುವಂತೆ ಇಂಗ್ಲೆಂಡ್ ಮಾಲೀಕರಿಂದ ಮುಸ್ಲಿಂ ಮಹಿಳೆಗೆ ಆದೇಶ: ದೂರು ದಾಖಲು
ಭಯೋತ್ಪಾದಕ ಸಂಬಂಧ ಸೂಚಿಸುವುದರಿಂದ ಕಪ್ಪು ಹೈಜಾಬ್ ನ್ನು ತೆಗೆಯಬೇಕೆಂದು ಮಾಲೀಕರು...
ಲಂಡನ್: ಭಯೋತ್ಪಾದಕ ಸಂಬಂಧ ಸೂಚಿಸುವುದರಿಂದ ಕಪ್ಪು ಹೈಜಾಬ್ ನ್ನು ತೆಗೆಯಬೇಕೆಂದು ಮಾಲೀಕರು ಆದೇಶ ನೀಡಿದ್ದರ ವಿರುದ್ಧ ಮುಸಲ್ಮಾನ ಮಹಿಳೆ ಇಂಗ್ಲೆಂಡಿನ ನ್ಯಾಯಾಧೀಕರಣದಲ್ಲಿ ಧಾರ್ಮಿಕ ತಾರತಮ್ಯ ದೂರನ್ನು ದಾಖಲಿಸಿದ್ದಾರೆ.
ಗ್ರೇಟರ್ ಮ್ಯಾಂಚೆಸ್ಟರ್ ನ ಎಸ್ಟೇಟ್ ವೊಂದರಲ್ಲಿ ತಾನು ಕಳೆದ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದು ತಮ್ಮ ಹಿಜಾಬ್ ನ್ನು ತೆಗೆಯುವಂತೆ ಮ್ಯಾನೇಜರ್ ಸೂಚಿಸಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮ್ಯಾಂಚೆಸ್ಟರ್ ಉದ್ಯೋಗ ನ್ಯಾಯಾಧೀಕರಣದಲ್ಲಿ ದೂರು ದಾಖಲಾಗಿದ್ದು, ಅದರಲ್ಲಿ ತಮ್ಮ ವ್ಯಾಪಾರ, ವ್ಯವಹಾರದ ಹಿತದೃಷ್ಟಿಯಿಂದ ಹಿಜಾಬ್ ನ ಬಣ್ಣವನ್ನು ಬದಲಾಯಿಸುವುದು ಉತ್ತಮ. ಯಾಕೆಂದರೆ ಕಪ್ಪು ಭಯೋತ್ಪಾದಕರ ಜೊತೆಗಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಮಾಲೀಕರು ಸೂಚಿಸಿದರು ಎಂದು ಮಹಿಳೆ ದೂರಿನಲ್ಲಿ ಹೇಳಿರುವುದಾಗಿ ದಿ ಇಂಡಿಪೆಂಡೆಂಟ್ ವರದಿ ಮಾಡಿದೆ.
ಕಪ್ಪು ಹೆಡ್ಸ್ಕ್ಯಾರ್ಫ್ ಹಾಕದಂತೆ ದೂರವಾಣಿ ಮೂಲಕ ಮ್ಯಾನೇಜರ್ ಮಹಿಳೆಗೆ ಸೂಚಿಸಿದ್ದಲ್ಲದೆ ಮರುದಿನ ಬಣ್ಣದ ಹಿಜಾಬ್ ನ್ನು ಕಚೇರಿಗೆ ತಂದಿದ್ದರು.ಕೊನೆಗೆ
ಕಂಪೆನಿ ಮಾಲೀಕರ ಶೋಷಣೆ, ಹಿಂಸೆ ತಾಳಲಾರದೆ ರಾಜೀನಾಮೆ ನೀಡಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.