ವಿದೇಶ

ಪನಾಮಾ ಪೇಪರ್ಸ್ ಪ್ರಕರಣವೊಂದು 'ಹಾಸ್ಯ': ಪಾಕ್ ಪ್ರಧಾನಿ ಷರೀಫ್

Manjula VN
ಲಂಡನ್: ಭಾರೀ ಚರ್ಚೆ ಹಾಗೂ ಸುದ್ದಿಗಳಿಗೆ ಗ್ರಾಸವಾಗಿರುವ ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣವೊಂದು 'ಹಾಸ್ಯ' ಎಂದು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಭಾನುವಾರ ಹೇಳಿದ್ದಾರೆ. 
ಪನಾಮಾ ದಾಖಲೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಈ ಹಿಂದೆ ಸುಪ್ರೀಂಕೋರ್ಟ್ 6 ಸದಸ್ಯರ ಜಂಟಿ ತನಿಖಾ ಸಮಿತಿ (ಜೆಐಟಿ)ಯನ್ನು ರಚಿಸಿತ್ತು. 
ಜಂಟಿ ತನಿಖಾ ಸಮಿತಿ ರಚನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಜೆಐಟಿ ತನಿಖಾಧಿಕಾರಿಗಳ ವಿಚಾರಣೆಗೊಳಪಡಲು ನಾನು ಸಿದ್ಧನಿದ್ದೇನೆ. ನನ್ನ ವ್ಯಕ್ತಿತ್ವವನ್ನು ಹಾಗೂ ಗೌರವವನ್ನು ಹಾಳು ಮಾಡಲು ನಡೆಸಲಾಗುತ್ತಿರುವ ಪಿತೂರಿಗಳನ್ನು ಮುಂದುವರೆಯಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. 
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪನಾಮಾ ದಾಖಲೆ ಸೋರಿದೆ ಕುರಿತಂತೆ ನನ್ನ ಹಿಂದೆ ಏನೇನು ನಡೆಯುತ್ತಿದೆ ಎಂಬುದು ನನ್ನ ಗ್ರಹಿಕೆಗೆ ಬಂದಿಲ್ಲ. ನಾಲ್ಕು ವರ್ಷಗಳ ನಮ್ಮ ಸರ್ಕಾರದಲ್ಲಿ, ಸರ್ಕಾರ ಯೋಜನೆಗಳಲ್ಲಿ ಭ್ರಷ್ಟಾಚಾರಗಳು ಕಂಡು ಬರದಿದ್ದ ಕಾರಣ. ನಮ್ಮ ಖಾಸಗಿ ವ್ಯವಹಾರಗಳ ಕಣ್ಣು ಹಾಕುತ್ತಿದ್ದಾರೆ. ಜೆಐಟಿ ಏನನ್ನು ಹುಡುಕಲು ಯತ್ನಿಸುತ್ತಿದೆ. ವಿಚಾರಣೆಗೆ ನಾನು ಹಾಜರಾಗುವುದಕ್ಕೂ ಮುನ್ನ ನಮ್ಮ ಶತ್ರುಗಳು ಹಾಜರಾಗಿರುತ್ತಾರೆಂದು ತಿಳಿಸಿದ್ದಾರೆ. 
SCROLL FOR NEXT