ವಿದೇಶ

ಲಂಡನ್: 'ಆತ್ಮಹತ್ಯೆಯ ಪತ್ರ ಬರೆಯಿರಿ" ಎಂದು ವಿದ್ಯಾರ್ಥಿಗಳಿಗೆ ಹೋಂವರ್ಕ್!

Srinivasamurthy VN

ಲಂಡನ್‌: ಬ್ರಿಟನ್‌ನ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಆತ್ಮಹತ್ಯೆಯ ಕುರಿತು ಪತ್ರ ಬರೆದುಕೊಂಡು ಬರುವಂತೆ ಹೋಂವರ್ಕ್ ನೀಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಶಾಲಾ ಮಕ್ಕಳಿಗೆ ಹೋಂವರ್ಕ್ ಕೊಡುವುದು ಹೊಸದೇನಲ್ಲ. ಕೆಲ ವಿಕೃತ ಮನಸ್ಥಿತಿಯ ಶಿಕ್ಷಕರು ಚಿತ್ರ ವಿಚಿತ್ರ ಹೋಂವರ್ಕ್ ನೀಡುವ ಮೂಲಕ ಆಗಾಗ ಸುದ್ದಿಯಾಗಿತ್ತಿರುತ್ತಾರೆ. ಈ ಪಟ್ಟಿಗೆ ಇದೀಗ ಲಂಡನ್ ನ ಕಿಡ್‌ಬ್ರೂಕ್‌ ಜಿಲ್ಲೆಯ  ಥಾಮಸ್‌ ಟ್ಯಾಲ್ಲಿಸ್‌ ಸ್ಕೂಲ್‌ ಸೇರಿದ್ದು, ಶಾಲೆಯ ಶಿಕ್ಷಕರು ತಮ್ಮ ಶಾಲಾ ಮಕ್ಕಳಿಗೆ ಆತ್ಮಹತ್ಯೆಯ ಪತ್ರ ಬರೆಯಿರಿ ಎಂದು ಹೋಂವರ್ಕ್ ನೀಡಿದ್ದಾರೆ. ಶಿಕ್ಷಕರು, ನೀವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀರಿ ಎಂದು ಕಲ್ಪಿಸಿಕೊಂಡು ನಿಮ್ಮ  ಪ್ರೀತಿಪಾತ್ರರಿಗೆ ಅಂತಿಮ ಪತ್ರವೊಂದನ್ನು ಬರೆಯಿರಿ. ಇದೇ ಇಂದಿನ ಹೋಮ್‌ವರ್ಕ್ ಎಂದು ಹೇಳಿ ಕಳುಹಿಸಿದ್ದರಂತೆ. ಶಾಲೆಯ ಸಂವೇದನಾರಹಿತ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ. ಇನ್ನೂ ಎಳೆಯ ಮಕ್ಕಳಲ್ಲಿ ಆತ್ಮಹತ್ಯೆಯಂಥಹ  ವಿಷಯಗಳನ್ನು ತುಂಬುವ ಅವಶ್ಯಕತೆ ಏನಿತ್ತು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಚಾರ ಲಂಡನ್ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇನ್ನು ಶಾಲೆಯ ವಿಚಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಶಾಲೆಯ ಮುಖ್ಯಶಿಕ್ಷಕಿ ಪೋಷಕರ ಕ್ಷಮೆ ಕೋರಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿ ವಿವಾದಕ್ಕೆ ತೆರೆ  ಎಳೆಯುವ ಪ್ರಯತ್ನ ಮಾಡಿದ್ದಾರೆ.

SCROLL FOR NEXT