ವಿದೇಶ

ಪೆರು ರಾಷ್ಟ್ರಕ್ಕೆ ಭಾರತೀಯ-ಅಮೆರಿಕನ್ ಅಮೆರಿಕಾದ ರಾಯಭಾರಿ: ಟ್ರಂಪ್ ಆದೇಶ

Srinivas Rao BV
ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ-ಅಮೆರಿಕನ್ ಕೃಷ್ಣ ಆರ್ ಅರಸ್ ಅವರನ್ನು ಪೆರು ರಾಷ್ಟ್ರಕ್ಕೆ ಅಮೆರಿಕದ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ. 
1986 ರಿಂದ ಅಮೆರಿಕಾದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷ್ಣ ಆರ್ ಅರಸ್, ಸ್ಪೇನ್ ನ ಮಾಡ್ರಿಡ್ ನಲ್ಲಿರುವ ಅಮೆರಿಕದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀತಿ ರೂಪಣೆ ಹಾಗೂ ಆರ್ಥಿಕ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. 
ಅಮೆರಿಕದ 7 ರಾಯಭಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿ ಅನುಭವವಿರುವ ಕೃಷ್ಣ ಅರಸ್, ವಾಷಿಂಗ್ ಟನ್ ನಲ್ಲಿ ಉನ್ನತ ಅಧಿಕಾರದಲ್ಲಿಯೂ ಕಾರ್ಯನಿರ್ವಹಣೆ ಮಾಡಿದ್ದು, ಟೆಕ್ಸಾಸ್ ವಿವಿಯಿಂದ ಎಂಎಸ್ ನ್ ಪದವಿ ಹಾಗೂ ಜಾರ್ಜ್ ಟೌಮ್ ವಿವಿಯಿಂದ ಬಿಎಸ್ ಪದವಿಯನ್ನು ಪಡೆದಿದ್ದಾರೆ. 
ಕೃಷ್ಣ ಅರಸ್ ಅವರು ಹಿಂದಿ, ತೆಲುಗು ಹಾಗೂ ಸ್ಪ್ಯಾನಿಷ್ ಭಾಷೆಗಳನ್ನು ತಿಳಿದಿದ್ದು, ಸಾರಿಗೆ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿ ಹಾಗೂ  ಅಮೇರಿಕಾದ ಸರ್ಕಾರಿ ಏವಿಯೇಷನ್ ನೆಗೋಶಿಯೇಟರ್ ಮುಖ್ಯಸ್ಥರಾಗಿಯೂ ಕೃಷ್ಣ ಅರಸ್ ಕಾರ್ಯನಿರ್ವಹಿಸಿದ್ದಾರೆ. 
SCROLL FOR NEXT