ವಿದೇಶ

ಭಾರತದ ಏರ್ ಆ್ಯಂಬುಲೆನ್ಸ್ ಬ್ಯಾಂಕಾಕ್ ನಲ್ಲಿ ಪತನ, ಪೈಲಟ್ ಸಾವು

Srinivasamurthy VN

ಬ್ಯಾಂಕಾಕ್: ದೆಹಲಿ-ಬ್ಯಾಂಕಾಕ್ ನಡುವೆ ಸಂಚರಿಸುತ್ತಿದ್ದ ಏರ್ ಆ್ಯಂಬುಲೆನ್ಸ್ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ ಪೈಲಟ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಬ್ಯಾಂಕಾಕ್ ನ ಹೊರವಲಯದಲ್ಲಿರುವ ವಸತಿ ಪ್ರದೇಶದ ಮೇಲೆ ವಿಮಾನ ಬಿದ್ದಿದ್ದು, ವಿಮಾನದ ಪೈಲಟ್ ಸಾವನ್ನಪ್ಪಿದ್ದಾನೆ. ಅಂತೆಯೇ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು  ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಸೇನಾ ಹೆಲಿಕಾಪ್ಟರ್ ಕೂಡಲೇ ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿತು.

ಪತನಕ್ಕೀಡಾದ ವಿಮಾನ ಮೆದಾಂತ ಸಂಸ್ಥೆಗೆ ಸೇರಿದ ಏರ್ ಆ್ಯಂಬುಲೆನ್ಸ್ ಆಗಿತ್ತು ಎಂದು ತಿಳಿದುಬಂದಿದೆ. ಪಿಲಟಸ್ ಪಿಸಿ-12 (ವಿಟಿ-ಎವಿಜಿ) ಸರಣಿ ಚಾರ್ಟೆಡ್ ವಿಮಾನವಾಗಿದ್ದು, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ  ವಿಮಾನ ಪತನವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂದು ಬೆಳಗ್ಗೆ ದೆಹಲಿಯಿಂದ ಟೇಕ್ ಆಫ್ ಆಗಿದ್ದ ವಿಮಾನ ಕೋಲ್ಕತಾ ಮಾರ್ಗವಾಗಿ ಬ್ಯಾಂಕಾಕ್ ಗೆ ಪ್ರಯಾಣಿಸುತ್ತಿತ್ತು. ಬ್ಯಾಂಕಾಕ್ ನ ನ್ಯಾಖೋನ್ ಪಾಥಮ್  ವಿಮಾನ ನಿಲ್ದಾಣದಲ್ಲಿ ಇಳಿಯ ಬೇಕಿದ್ದ ವಿಮಾನ ನಿಲ್ದಾಣಕ್ಕೆ ಇನ್ನೂ 730 ಕಿ.ಮೀ ಬಾಕಿ ಇರುವಂತೆಯೇ ಬ್ಯಾಂಕಾಕ್ ಹೊರವಲಯದ ಜನವಸತಿ ಪ್ರದೇಶದ ಮೇಲೆ ಬಿದ್ದಿದೆ.

ಪ್ರಸ್ತುತ ಘಟನೆ ಸಂಬಂಧ ಬ್ಯಾಂಕಾಕ್ ಸರ್ಕಾರ ತನಿಖೆಗೆ ಆದೇಶಿಸಿದೆ.

SCROLL FOR NEXT