ಅಮೆರಿಕದ ಕನ್ಸಾಸ್ ಗವರ್ನರ್ ಸ್ಯಾನ್ ಬ್ರೌನ್ ಬ್ಯಾಕ್ 
ವಿದೇಶ

ಭಾರತೀಯ ಟೆಕ್ಕಿ ಹತ್ಯೆ ಪ್ರಕರಣ: ಪ್ರಧಾನಿ ಮೋದಿಗೆ ಕನ್ಸಾಸ್ ಗವರ್ನರ್ ವಿಷಾದ ಪತ್ರ

ಭಾರತೀಯ ಪ್ರಜೆಗಳ ಮೇಲೆ ನಡೆದ ಭೀಕರ ಹಿಂಸಾಚಾರದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೆರಿಕದ ಕನ್ಸಾಸ್ ಗವರ್ನರ್ ಸ್ಯಾನ್ ಬ್ರೌನ್ ಬ್ಯಾಕ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ...

ವಾಷಿಂಗ್ಟನ್: ಭಾರತೀಯ ಪ್ರಜೆಗಳ ಮೇಲೆ ನಡೆದ ಭೀಕರ ಹಿಂಸಾಚಾರದ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅಮೆರಿಕದ ಕನ್ಸಾಸ್ ಗವರ್ನರ್ ಸ್ಯಾನ್ ಬ್ರೌನ್ ಬ್ಯಾಕ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ  ಪತ್ರವನ್ನು ಬರೆದಿದ್ದಾರೆ. 
ಮಾರ್ಚ್ 3 ರಂದು ಪತ್ರ ಬರೆದಿರುವ ಸ್ಯಾನ್ ಬ್ರೌನ್ ಬ್ಯಾಕ್ ಅವರು, ರಾಜ್ಯದಲ್ಲಿ ಯಾವುದೇ ದ್ವೇಷ ಮತ್ತು ಅಸಹಿಷ್ಣುತೆಯ ನಡವಳಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. 
ಶ್ರೀನಿವಾಸ್ ಕುಚಿಬೋಟ್ಲ ಮತ್ತು ಅಲೋಕ್ ಮದಸನಿ ಮೇಲೆ ನಡೆದ ಭೀರಕ ಹಿಂಸಾಚಾರದ ಬಗ್ಗೆ ಕನ್ಸಾಸ್ ಗವರ್ನರ್ ಆಗಿ ನಾನು ತೀವ್ರ ಬೇಸರ ಮತ್ತು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಶ್ರೀನಿವಾಸ್ ಅವರ ಪತ್ನಿ ಸುನಯನ ಮತ್ತು ಹೈದರಾಬ್ದ್ ನಲ್ಲಿರುವ ಅವರ ಕುಟುಂಬದ ದುಃಖವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಶ್ರೀನಿವಾಸ್ ಅವರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಿದ್ದರು. ದೊಡ್ಡವರನ್ನು ಗೌರವಿಸುತ್ತಿದ್ದರು ಎಂದು ಕೇಳಿದ್ದೇನೆ. ಧೈರ್ಯ, ಪ್ರೀತಿ ಮತ್ತು ಗೌರವದ ವಿಷಯದಲ್ಲಿ ನಾವು ಶ್ರೀನಿವಾಸ್ ಅವರ್ನು ಮಾದರಿಯಾಗಿಸಿಕೊಂಡು ಬದುಕಲು ಪ್ರಯತ್ನಿಸಬೇಕೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?