ಸಾಂದರ್ಭಿಕ ಚಿತ್ರ 
ವಿದೇಶ

ಚೀನಾವನ್ನು ಹತ್ತಿಕ್ಕಲು ಭಾರತ ಅಮೆರಿಕಾ ಮತ್ತು ಜಪಾನ್ ಬಲೆಗೆ ಬೀಳಬಾರದು: ಚೀನಾ ರಾಷ್ಟ್ರೀಯ ಮಾಧ್ಯಮ ಒತ್ತಾಯ

ಚೀನಾವನ್ನು ಹತ್ತಿಕ್ಕಲು ಅಮೆರಿಕಾ ಮತ್ತು ಜಪಾನ್ ನ ಭಾರತವನ್ನು ಬಳಸುತ್ತಿದ್ದು, ಅವುಗಳ ಬಲೆಗೆ ಭಾರತ...

ಬೀಜಿಂಗ್: ಚೀನಾವನ್ನು ಹತ್ತಿಕ್ಕಲು ಅಮೆರಿಕಾ ಮತ್ತು ಜಪಾನ್ ನ ಭಾರತವನ್ನು ಬಳಸುತ್ತಿದ್ದು, ಅವುಗಳ ಬಲೆಗೆ ಭಾರತ ಬೀಳಬಾರದು ಎಂದು ಚೀನಾ ಹೇಳಿದ್ದು ಇಂತಹ ನಡೆ ಭಾರತಕ್ಕೆ ಹೆಚ್ಚಿನ ಅಪಾಯವನ್ನು ಎದುರಿಸುವಂತೆ ಮಾಡಬಹುದು ಎಂದು ಚೀನಾದ ರಾಷ್ಟ್ರೀಯ ಮಾಧ್ಯಮ ಒತ್ತಾಯಿಸಿದೆ.
ಹಿಂದೂ ಮಹಾಸಾಗರದ ಮೇಲಿನ ಚೀನಾದ ಪ್ರಭಾವವನ್ನು ಹತ್ತಿಕ್ಕಲು ಅಮೆರಿಕಾ ಭಾರತವನ್ನು ಬಳಸಿಕೊಳ್ಳುತ್ತಿದೆ.ಭಾರತದ ಸಹಾಯದಿಂದ ಫೆಸಿಫಿಕ್ ಸಾಗರದಲ್ಲಿ ಚೀನಾವನ್ನು ಹತ್ತಿಕ್ಕಲು ಜಪಾನ್ ಯತ್ನಿಸುತ್ತಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ನ ಚೀನಾದ ಆವೃತ್ತಿಯ ಸಂಪಾದಕತ್ವದಲ್ಲಿ ಹೇಳಲಾಗಿದೆ.  
ಭಾರತಕ್ಕೆ ಇದು ಕಾರ್ಯತಂತ್ರವೆನಿಸಿದರೂ ಬಲೆಗೆ ಬೀಳಿಸುವ ಪ್ರಯತ್ನವಾಗಿದೆ. ಭಾರತ ಒಮ್ಮೆ ಈ ಬಲೆಯೊಳಗೆ ಬಿದ್ದರೆ ಮುಂದೆ ಅದು ಅಮೆರಿಕಾ ಮತ್ತು ಜಪಾನ್ ಗೆ ಅಡಿಯಾಳಾಗಲಿದ್ದು ಇನ್ನಷ್ಟು ಅಪಾಯಗಳನ್ನು ಎದುರಿಸಬೇಕಾಗುವುದಲ್ಲದೆ ಅನೇಕ ಅವಕಾಶಗಳನ್ನು ಕಳೆದುಕೊಳ್ಳಲಿದೆ ಎಂದು ಮಾಧ್ಯಮ ಎಚ್ಚರಿಕೆ ನೀಡಿದೆ. 
ವಿಶ್ವದಲ್ಲಿ ಪ್ರಮುಖ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವ ಭಾರತ ತನ್ನ ಭದ್ರತೆಗೆ ಹೊರಗಿನ ಶಕ್ತಿಯನ್ನು ಹೆಚ್ಚು ಅವಲಂಬಿಸಿಕೊಂಡರೆ ಅದು ಇನ್ನಷ್ಟು ಸ್ವ ತುಚ್ಛೀಕರಣಕ್ಕೆ ಒಳಗಾಗುತ್ತದೆ. ಭಾರತ ಅಭಿವೃದ್ಧಿ ಹೊಂದಬೇಕಾದರೆ ತನ್ನ ನೆರೆ ದೇಶಗಳ ಜೊತೆ ಹೆಚ್ಚು ಮುಕ್ತವಾಗಬೇಕು ಮತ್ತು ಸ್ಥಳೀಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದೆ.
ಅಮೆರಿಕಾಕ್ಕೆ ಚೀನಾದ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. ಏಷ್ಯಾ-ಪೆಸಿಫಿಕ್ ಭದ್ರತೆಯಲ್ಲಿ ಚೀನಾ ಮತ್ತು ಭಾರತ ದೊಡ್ಡ ಪಾತ್ರ ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಾಧ್ಯಮದ ಸಂಪಾದಕೀಯದಲ್ಲಿ ವಿವರಿಸಲಾಗಿದೆ.
ಭಾರತ ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡರೆ ಬೆದರಿಕೆಗೆ ಬದಲಾಗಿ ಹೆಚ್ಚು ಅವಕಾಶಗಳ ಹುಡುಕಾಟ ನಡೆಸಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

ಪಶ್ಚಿಮ ಬಂಗಾಳ: ಇಬ್ಬರಿಗೆ ನಿಪಾ ವೈರಸ್ ಪಾಸಿಟಿವ್, ನರ್ಸ್‌ಗಳ ಸ್ಥಿತಿ ಗಂಭೀರ

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

SCROLL FOR NEXT