ಸಿರಿಯಾದಲ್ಲಿ ವಾಯುದಾಳಿ: ಜೈಲು ಸಿಬ್ಬಂದಿಗಳು ಸೇರಿ 16 ಸಾವು
ವಾಯುವ್ಯ ಸಿರಿಯಾದ ಇಬ್ಲಿಬ್ ನ ಜೈಲಿನ ಮೇಲೆ ಕಳೆದ ರಾತ್ರಿ ನಡೆದ ವಾಯುದಾಳಿಯಲ್ಲಿ ಜೈಲು ಸಿಬ್ಬಂದಿಗಳು ಸೇರಿದಂತೆ 16 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು...
ಲೆಬೆನಾನ್: ವಾಯುವ್ಯ ಸಿರಿಯಾದ ಇಬ್ಲಿಬ್ ನ ಜೈಲಿನ ಮೇಲೆ ಕಳೆದ ರಾತ್ರಿ ನಡೆದ ವಾಯುದಾಳಿಯಲ್ಲಿ ಜೈಲು ಸಿಬ್ಬಂದಿಗಳು ಸೇರಿದಂತೆ 16 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.
ವಾಯುದಾಳಿಯಿಂದಾಗಿ ಸದ್ಯ ಮೃತರ ಸಂಖ್ಯೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮೃತರ ಸಂಖ್ಯೆ ಹೆಚ್ಚಾಗಬಹುದು ಎಂದು ಮಾನವ ಹಕ್ಕು ವೀಕ್ಷಣಾಲಯ ಅಧಿಕಾರಿಗಳು ಹೇಳಿದ್ದಾರೆ.
ರಷ್ಯಾದ ಯುದ್ಧ ವಿಮಾನಗಳು ಈ ವಾಯುದಾಳಿಯನ್ನು ನಡೆಸಿವೆ. ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸದ್ ವಿರುದ್ಧ ಹೋರಾಡುತ್ತಿರುವ ಇತರ ಬಂಡುಕೋರರನ್ನೂ ಹತ್ತಿಕ್ಕಲು ರಷ್ಯಾ ಸೇನೆ 2015ರಿಂದ ಕಾರ್ಯಾಚರಣೆ ಕೈಗೊಂಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.