ಕ್ಯಾಲಿಫೋರ್ನಿಯಾ: ಅಮೆರಿಕದ ತಂದೆಯೋರ್ವ ಭಾರತದ ಆಧ್ಯಾತ್ಮ ಮಂತ್ರ ಓಂಕಾರವನ್ನು ಪಠಿಸುವ ಮೂಲಕ ತನ್ನ ಮುಗುವಿನ ಅಳು ನಿಲ್ಲಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಇನ್ಸಿನಿಟಾಸ್ ನಿವಾಸಿಯಾದ ಡೇನಿಯಲ್ ಎಸೆನ್ ಮನ್ ಎಂಬಾತ ತನ್ನ ಪುಟ್ಟಮಗುವಿನ ಅಳು ನಿಲ್ಲಿಸುವುದಕ್ಕಾಗಿ ಓಂ ಮಂತ್ರವನ್ನು ಜಪಿಸಿ ಅಳು ನಿಲ್ಲಿಸಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಹೌ ಟು ಸ್ಟಾಪ್ ಎ ಕ್ರೈಯಿಂಗ್ ಬೇಬಿ (ಮಗುವಿನ ಅಳುವನ್ನು ನಿಲ್ಲಿಸುವುದು ಹೇಗೆ) ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಇನ್ಸ್ ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿ ವಿಡಿಯೋ ವೈರಲ್ ಆಗಿದ್ದು, ಇನ್ಸ್ ಟಾಗ್ರಾಮ್ ನಲ್ಲಿ ಸುಮಾರು 36 ಸಾವಿರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ.
ಇನ್ನು ಫೇಸ್ ಬುಕ್ ನಲ್ಲಿ ಸುಮಾರು 33 ಮಿಲಿಯನ್ ಮಂದಿ ಈ ವಿಡಿಯೋ ವೀಕ್ಷಿಸಿ ಡೇನಿಯಲ್ ಎಸೆನ್ ಮನ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಈ ಲೈವ್ ವಿಡಿಯೋಗೆ ವ್ಯಕ್ತವಾದ ಬೆಂಬಲದಿಂದಾಗಿ ಡೇನಿಯಲ್ ಎಸೆನ್ ಮನ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.