ವಿದೇಶ

ಟಾಂಜೇನಿಯಾದಲ್ಲಿ ಭೀಕರ ಅಪಘಾತ; ಕಂದಕಕ್ಕೆ ಶಾಲಾ ಬಸ್ ಉರುಳಿ 35 ಮಂದಿ ಸಾವು!

Srinivasamurthy VN

ಡೊಡೊಮಾ: ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಅದರೊಳಗಿದ್ದ ಎಲ್ಲ 35 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಟಾಂಜೇನಿಯಾದಲ್ಲಿ ನಡೆದಿದೆ.

ಟಾಂಜೇನಿಯಾದ ಕರಟು ಜಿಲ್ಲೆಯ ಅರುಶಾ ಪ್ರಾಂತ್ಯದಲ್ಲಿ ದುರಂತ ಸಂಭವಿಸಿದ್ದು, ಖಾಸಗಿ ಶಾಲೆಗೆ ಸೇರಿದ ಬಸ್ ವೊಂದು ಮರೇರಾ ನದಿ ಯ ಕಂದಕಕ್ಕೆ ಉರುಳಿದೆ. ಪರಿಣಾಮ ಬಸ್ ನಲ್ಲಿದ್ದ 32 ಮಂದಿ ಶಾಲಾ ಮಕ್ಕಳು, ಇಬ್ಬರು  ಶಿಕ್ಷಕರು ಹಾಗೂ ಬಸ್ ನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ದೌಡಾಯಿಸಿ ಶವಗಳನ್ನು ಮೇಲೆತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟಾಂಜೇನಿಯಾ ಅಧ್ಯಕ್ಷ ಜಾನ್ ಮಗುಫುಲ್ ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಬೇಕಾದ ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥಖರಿಗೆ  ಸರ್ಕಾರ ನೆರವಿಗೆ ನಿಲ್ಲುತ್ತದೆ ಎಂದು ಸಾಂತ್ವನ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿಗಳು ತಿಳಿಸಿರುವಂತೆ ಬಸ್ ಚಾಲಕವ ಅತಿಯಾದ ವೇಗವೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಟಾಂಜೇನಿಯಾದಲ್ಲಿ ಅತಿ ವೇಗದ ಚಾಲನೆಯಿಂದಾಗಿ ಪ್ರತೀವರ್ಷ 3 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ  ಎಂದು ಸರ್ಕಾರಿ ದಾಖಲೆಗಳಲ್ಲಿನ ಅಂಕಿ ಅಂಶಗಳು ತಿಳಿಸಿವೆ.

SCROLL FOR NEXT