ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ತಪ್ಪು ವಾಟ್ಸ್ ಆಪ್ ಮಾಹಿತಿ: ಫೇಸ್ ಬುಕ್ ಗೆ ಇಯು ದಂಡ

ವಾಟ್ಸ್ ಆಪ್ ನಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಯುರೋಪಿಯನ್ ಯೂನಿಯನ್ ಫೇಸ್ ಬುಕ್ ಗೆ ದಂಡ ವಿಧಿಸಿದೆ.

ವಾಟ್ಸ್ ಆಪ್
Srinivas Rao BV
Updated On : 18 May 2017, 3:38 am
ಬ್ರಸೆಲ್ಸ್: ವಾಟ್ಸ್ ಆಪ್ ನಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಯುರೋಪಿಯನ್ ಯೂನಿಯನ್ ಫೇಸ್ ಬುಕ್ ಗೆ ದಂಡ ವಿಧಿಸಿದೆ. 
2014 ರಲ್ಲಿ ವಾಟ್ಸ್ ಆಪ್ ಖರೀದಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿರುವುದಕ್ಕಾಗಿ ಫೇಸ್ ಬುಕ್ ಗೆ ಯುರೋಪಿಯನ್ ಯೂನಿಯನ್ 110 ಮಿಲಿಯನ್ ಯುರೋಗಳಷ್ಟು ($122 ಮಿಲಿಯನ್) ನಷ್ಟು ದಂಡ ವಿಧಿಸಿದೆ. ಇಂದಿನ ತೀರ್ಪು ಎಲ್ಲಾ ಸಂಸ್ಥೆಗಳೂ ಇಯು ವಿಲೀನ ನಿಯಮಗಳನ್ನು ಪಾಲಿಸಬೇಕೆಂಬ ಸಂದೇಶವನ್ನು ರವಾನೆ ಮಾಡಿದೆ ಎಂದು ಇಯು ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ. 
ಇದಕ್ಕೂ ಮುನ್ನ ಅಕ್ರಮ ಡಾಟಾ ಸಂಗ್ರಹಣೆ ಮಾಡಿದ್ದಕ್ಕಾಗಿ ಫ್ರೆಂಚ್ ಅಧಿಕಾರಿಗಳು ಫೇಸ್ ಬುಕ್ ಗೆ 150,000 ಯುರೋಗಳಷ್ಟು ದಂಡ ವಿಧಿಸಿದ್ದರು. ಡಾಟಾ ಸಂಗ್ರಹಣೆ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಎರಡು ವರ್ಷ ವಿಚಾರಣೆ ನಡೆದ ಬಳಿಕ ಫ್ರೆಂಚ್ ಅಧಿಕಾರಿಗಳು ದಂಡ ವಿಧಿಸಿದ್ದರು. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments