ರವಿ ಕುಮಾರ್ (Photo: Facebook/Ravi Kumar Rk) 
ವಿದೇಶ

ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಶವವಾಗಿ ಪತ್ತೆ

ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು...

ಕಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. 
8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಏರಿ ವಿಜಯ ಪತಾಕೆ ಹಾರಿಸಿದ್ದ ಉತ್ತರ ಪ್ರದೇಶದ ರವಿ ಕುಮಾರ್ ಅವರು ಪರ್ವತದಿಂದ ಇಳಿಯುವಾಗ ಸುಮಾರು 200 ಮೀಟರ್ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರವಿ ಕುಮಾರ್ ಪರ್ವತ ಶಿಖರ ಏರಿದ ಬಳಿಕ ವಾಪಸ್ ಬರುವಾರ ಬಾಲ್ಕೋನಿ ಎಂಬ ಪ್ರದೇಶದಲ್ಲಿ ಸುಮಾರು 150ರಿಂದ 200 ಮೀಟರ್ ಆಳಕ್ಕೆ ಬಿದ್ದು ಮೃತಪಟ್ಟಿರುವುದಾಗಿ ಮೌಂಟ್ ಎವರೆಸ್ಟ್ ನಲ್ಲಿರುವ ನಮ್ಮ ಸಂಪರ್ಕ ಕಚೇರಿಯ ಅಧಿಕಾರಿ ಖಚಿತಪಡಿಸುವುದಾಗಿ ಪ್ರವಾಸೋದ್ಯಮ ಇಲಾಖೆಯ ಮಹಾ ನಿರ್ದೇಶಕ ದಿನೇಶ್ ಭಟ್ಟಾರಿಯಾ ಅವರು ಹೇಳಿದ್ದಾರೆ.
ಬಾಲ್ಕೋನಿ ಪರ್ವಾತರೋಹಿಗಳು ವಿಶ್ರಮಿಸುವ ಕೊನೆಯ ಸ್ಥಳವಾಗಿದೆ ಎಂದು ಅವರು ತಿಳಿಸಿದ್ದಾರೆ.
ರವಿ ಕುಮಾರ್ ಅವರು ಕಳೆದ ಶನಿವಾರ ಮಧ್ಯಾಹ್ನ 1.28ಕ್ಕೆ ವಿಶ್ವದ ಅತಿ ಎತ್ತರದ ಪರ್ವತ ಶಿಖರದ ತುದಿ ತಲುಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಅಮೆರಿಕದೊಂದಿಗೆ ಮಾತುಕತೆಗೆ ಇರಾನ್ ನಕಾರ; 'ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿಲ್ಲ': ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಪಾಕಿಸ್ತಾನ!

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

ಪೆಟ್ರೋಲ್ ದರ ಏರಿಕೆ, ದೇಶಾದ್ಯಂತ ವ್ಯಾಪಕ ಪ್ರತಿಭಟನೆ; ಬೆಚ್ಚಿಬಿದ್ದ Pak ಸರ್ಕಾರ, ಲೀಟರ್ ಗೆ 80 ರೂ ಗಳಷ್ಟು ಬೆಲೆ ಕಡಿತ!

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

SCROLL FOR NEXT