ವಿದೇಶ

ನಂಬಿಕೆಯಾಧಾರಿತ ಭಾರತ-ರಷ್ಯಾದ ಸ್ನೇಹ ದುರ್ಬಲಗೊಳ್ಳುವುದಿಲ್ಲ: ವ್ಲಾದಿಮಿರ್ ಪುಟಿನ್

Srinivas Rao BV
ಮಾಸ್ಕೋ: ಪಾಕಿಸ್ತಾನದೊಂದಿಗೆ ವೃದ್ಧಿಸುತ್ತಿರುವ ರಷ್ಯಾದ ಸ್ನೇಹ ಭಾರತಕ್ಕೆ ಅಬಾಧಿತ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. 
ಭಾರತವನ್ನು ರಷ್ಯಾದ ಪರಮಾಪ್ತ ರಾಷ್ಟ್ರ ಎಂದು ಬಣ್ಣಿಸಿರುವ ವ್ಲಾದಿಮಿರ್ ಪುಟಿನ್, ಪಾಕಿಸ್ತಾನದೊಂದಿಗೆ ಅಥವಾ ಇನ್ನು ಯಾವುದೇ ರಾಷ್ಟ್ರದೊಂದಿಗೆ ಬೆಳೆಯುತ್ತಿರುವ ರಷ್ಯಾದ ದ್ವಿಪಕ್ಷೀಯ ಸಂಬಂಧದಿಂದ ಭಾರತದೊಂದಿಗಿನ ನಮ್ಮ ಸ್ನೇಹ ದುರ್ಬಲಗೊಳ್ಳುವುದಿಲ್ಲ ಎಂದಿದ್ದಾರೆ. 
ರಷ್ಯಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಈ ವೇಳೆ ಪಿಟಿಐ ನೊಂದಿಗೆ ಮಾತನಾಡಿರುವ ಪುಟಿನ್, ರಷ್ಯಾ ಕ್ಷಿಪಣಿ ಸೇರಿದಂತೆ ಅತ್ಯಂತ ಸೂಕ್ಷ್ಮ ವಲಯಗಳಲ್ಲಿ ಗಾಢವಾದ ಸಹಕಾರ ಹೊಂದಿರುವ ಏಕೈಕ ರಾಷ್ಟ್ರ ಎಂದರೆ ಅದು ಭಾರತ, ಬೇರೆ ಯಾವುದೇ ರಾಷ್ಟ್ರಗಳೊಂದಿಗೆ ರಷ್ಯಾ ಬಾಂಧವ್ಯ ಬೆಳೆದರೂ ಭಾರತದ ಸ್ನೇಹ ಅದರಿಂದ ದುರ್ಬಲವಾಗುವುದಿಲ್ಲ, ಎಲ್ಲಿಂದಲಾದರೂ ಅಪಾಯ ಎದುರಾಗಲಿ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಷ್ಯಾ ಭಾರತದೊಂದಿಗೆ ನಿಲ್ಲಲಿದೆ ಎಂದು ಪುಟಿನ್ ಭರವಸೆ ನೀಡಿದ್ದಾರೆ. 
SCROLL FOR NEXT