ಕೆನೆತ್‌ ಜಸ್ಟರ್ 
ವಿದೇಶ

ಭಾರತಕ್ಕೆ ಅಮೆರಿಕಾದ ರಾಯಭಾರಿಯಾಗಿ ಕೆನೆತ್‌ ಜಸ್ಟರ್‌ ನೇಮಕ

ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ಕೆನೆತ್‌ ಜಸ್ಟರ್‌ ಅವರನ್ನು ನೇಮಕ ಮಾಡಲಾಗಿದೆ.

ವಾಷಿಂಗ್ ಟನ್:  ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ಕೆನೆತ್‌ ಜಸ್ಟರ್‌ ಅವರನ್ನು ನೇಮಕ ಮಾಡಲಾಗಿದೆ. ಕೆನೆತ್‌  ಅವರ ನೇಮಕವನ್ನು ಅಮೆರಿಕದ ಸೆನೆಟ್ ಧ್ವನಿಮತದ ಮೂಲಕ ಅಂಗೀಕರಿಸಿದೆ.
ರಿಚರ್ಡ್‌ ವರ್ಮಾ ಅವರ ಸ್ಥಾನಕ್ಕೆ ಕೆನೆತ್ ನೇಮಕವಾಗುತ್ತಿದ್ದು ಡೊನಾಲ್ಡ್‌ ಟ್ರಂಪ್‌ ಅಮೆರಿಕಾ ಅಧ್ಯಕ್ಷರಾದ ಕೂಡಲೇ  ರಿಚರ್ಡ್‌ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲಿಂದ ಕೆಲವು ತಿಂಗಳ ಕಾಲ ಈ ಹುದ್ದೆ ಖಾಲಿಯಾಗಿ  ಉಳಿದಿತ್ತು. 
ಓರ್ವ ಉನ್ನತ ಆರ್ಥಿಕ ಸಲಹೆಗಾರರಾಗಿರುವ ಕೆನೆತ್ ಹೈದರಾಬಾದಿನಲ್ಲಿ ನಡೆಯಲಿರುವ ‘ಜಾಗತಿಕ ಉದ್ಯಮಶೀಲತಾ ಶೃಂಗಸಭೆ’ ಗಿಂತ ಮೊದಲೇ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
62 ವರ್ಷದ  ಕೆನೆತ್‌ ಜಸ್ಟರ್‌ ಈ ಮೊದಲು ಅಮೆರಿಕ ಅಧ್ಯಕ್ಷರ ಅಂತಾರಾಷ್ಟ್ರೀಯ ವ್ಯವಹಾರಗಳ ಸಲಹೆಗಾರರಾಗಿ, ಟ್ರಂಪ್‌ ಅವರ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಕೆನೆತ್‌ ರಚಿಸಿದ್ದ ಭಾರತ-ಅಮೆರಿಕ ಪರಮಾಣು ಒಪ್ಪಂದ ಎರಡು ದೇಶಗಳ ಸ<ಬಂಧ ವೃದ್ದಿಗೆ ಪ್ರೇರಣೆ ಒದಗಿಸಿತ್ತು ಎನ್ನುವುದನ್ನು ನಾವಿಲ್ಲಿ ನೆನೆಯಬಹುದು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT