ವಾಷಿಂಗ್ಟನ್: ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸಂಖ್ಯೆ ಈ ವರ್ಷ ಶೇ.12.3ರಷ್ಟು ಹೆಚ್ಚಾಗಿದ್ದು, ಇದರೊಂದಿಗೆ ಅಮೆರಿಕದಲ್ಲಿ ಎರಡನೇ ಅತಿ ದೊಡ್ಡ ವಿದೇಶೀ ವಿದ್ಯಾರ್ಥಿ ಸಮುದಾಯ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಚೀನಾ ನಂತರ ಅಮೆರಿಕದಲ್ಲಿ ಅತಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದು, ಅಮೆರಿಕದ ಆರ್ಥಿಕತೆಗೆ 6.5 ಮಿಲಿಯನ್ ಡಾಲರ್ ಕೊಡುಗೆ ನೀಡುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ವಾರ್ಷಿಕ ವರದಿ 'ಓಪನ್ ಡೋರ್ಸ್' ತಿಳಿಸಿದೆ.
ಓಪನ್ ಡೋರ್ಸ್ ವರದಿಯ ಅಂಕಿ ಅಂಶಗಳ ಪ್ರಕಾರ, 2016-17ನೇ ಸಾಲಿನಲ್ಲಿ 186,267 ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಮೆರಿಕದಲ್ಲಿರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತದ ಶೇ.17.3ರಷ್ಟು ವಿದ್ಯಾರ್ಥಳಿದ್ದಾರೆ.
ಇನ್ನು ಮೊದಲ ಸ್ಥಾನದಲ್ಲಿರುವ ಚೀನಾದ 350,755 ವಿದ್ಯಾರ್ಥಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪದವಿ ಮಟ್ಟದ ಶಿಕ್ಷಣಕ್ಕಾಗಿ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಮೆರಿಕಕ್ಕೆ ಆಗಮಿಸುತ್ತಿದ್ದು, ಕಳೆದ ಶೇ.11.2ರಷ್ಟು ಪದವಿಪೂರ್ವ, ಶೇ.56.6ರಷ್ಟು ಪದವಿ ಶಿಕ್ಷಣಕ್ಕಾಗಿ ಹಾಗೂ ಶೇ.1.2ರಷ್ಟು ಇತರೆ ಶಿಕ್ಷಣ ಪಡೆಯುವುದಕ್ಕಾಗಿ ಬಂದಿದ್ದಾರೆ ಎಂದು ವರದಿ ವಿವರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics