ವಿದೇಶ

ದ್ವಿಪೌರತ್ವ ವಿವಾದ: ಆಸ್ಟ್ರೇಲಿಯಾದ ಮತ್ತೊಬ್ಬ ಸಂಸದೆ ರಾಜಿನಾಮೆ

Lingaraj Badiger
ಸಿಡ್ನಿ: ದ್ವಿಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳವಾರ ಮತ್ತೊಬ್ಬ ಸಂಸದರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದರೊಂದಿಗೆ ಎಂಟು ಸಂಸದರು ರಾಜಿನಾಮೆ ನೀಡಿದಂತಾಗಿದೆ. ಈ ಮೂಲಕ ಆಸ್ಟ್ರೇಲಿಯಾದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.
ಫೆಡೆರಲ್ ಕಚೇರಿಯ ನಿಯಮ ಉಲ್ಲಂಘಿಸಿ ದ್ವಿಪೌರತ್ವ ಹೊಂದಿದ ಆರೋಪ ಎದುರಿಸುತ್ತಿದ್ದ ಸಂಸದೆ, ಜಾಕ್ವಿ ಲ್ಯಾಂಬಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ತಮ್ಮ ಸ್ಕಾಟಿಷ್ ತಂದೆ ಮತ್ತು ಅಜ್ಜನಿಂದ ಬ್ರಿಟಿಷ್ ಪೌರತ್ವ ಬಂದಿದೆ ಎಂಬುದು ಮಾತ್ರ ನನಗೆ ಗೊತ್ತು ಎಂದಿದ್ದಾರೆ.
ದ್ವಿಪೌರತ್ವ ಹೊಂದಿದ ಕಾರಣಕ್ಕೆ ನಾನು ಸಂಸದ ಸ್ಥಾನದಿಂದ ಅನರ್ಹವಾಗಿದ್ದೇನೆ ಎಂದು ನಿಮಗೆ ತಿಳಿಸುವುದಕ್ಕೆ ವಿಷಾದಿಸುತ್ತೇನೆ ಎಂದು ಅವರು ಹೇಳಿದ್ದಾರ.
SCROLL FOR NEXT